

ಹುಬ್ಬಳ್ಳಿ : ಜೀವಾತ್ಮ ಪರಮಾತ್ಮನಾಗಲು, ಅಂಗ ಲಿಂಗವಾಗಲು, ಭವಿ ಭಕ್ತನಾಗಲು, ಜ್ಞಾನ ಕ್ರಿಯಾತ್ಮಕ ಆಚರಣೆೆಯಿಂದ ಜೀವನ ಉಜ್ವಲಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಶ್ರೀ ಪಾರ್ವತಿ ಮಹಿಳಾ ಅಭಿವದ್ಧಿ ಮಂಡಳದ 23ನೇ ವರ್ಷದ ವಾಷಿರ್ಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.
ಸಂಸ್ಕಾರ ಸಂಸತಿಗಳ ಪರಿಪಾಲನೆಯಿಂದ ಮಾನವ ಜೀವನಕ್ಕೆ ಅಮೂಲ್ಯ ಬೆಲೆ ದೊರಕುತ್ತದೆ. ಜಗದ ಜನರ ಮನದ ಅಜ್ಞಾನ ಕಳೆದು ಜ್ಞಾನದ ಬುತ್ತಿಯನ್ನಿತ್ತು ಉದ್ಧರಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಶಿವಜ್ಞಾನದ ಅರಿವು ಮತ್ತು ಆಚರಣೆಯಿಂದ ಬದುಕಿನಲ್ಲಿ ಶಾಂತಿ ಸಮಾಧಾನ ದೊರಕುತ್ತವೆ. ಅಸಶೋದ್ಧಾರ ಮತ್ತು ಮಹಿಳೆಯರಿಗೆ ಧಾಮಿರ್ಕ ಸ್ವಾತಂತ್ರ$್ಯ ತಂದು ಕೊಟ್ಟ ಮೊದಲ ಕೀತಿರ್ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಧಾಮಿರ್ಕ ಮತ್ತು ಸಾಮಾಜಿಕ ಸತ್ಕ್ರಾಂತಿಯ ಮೂಲಕ ಸರ್ವ ಸಮುದಾಯಗಳ ಅಭ್ಯುದಯ ಏಳಿಗೆಗಾಗಿ ಶ್ರಮಿಸಿದ ಶಕ್ತಿ ಅವರದು ಎಂದು ಹೇಳಿದರು.
ಹೆಣ್ಣು ಅಬಲೆಯಲ್ಲ ಸಬಲೆಯೆಂದು ಅರಿವು ನೀಡಿ ಜಾಗತಿಯ ಅರಿವು ತೋರಿದವರು. ಮಹಿಳೆಯರಿಂದಲೇ ಭಾರತೀಯ ಉತಷ್ಟ ಸಂಸತಿ ಬೆಳೆದು ಬಂದಿದೆ. ಎಲ್ಲಿ ಸ್ತ್ರೀಯರಿಗೆ ಗೌರವ ದೊರಕುವುದೋ ಅಲ್ಲಿ ದೇವತೆಗಳು ವಾಸಿಸುತ್ತಾರೆಂದು ಶಾಸ್ತ್ರ ಹೇಳುತ್ತದೆ. ಇಂದಿನ ಕಲಿ ಕಾಲದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಅನಾಚಾರ, ಕೊಲೆಗಳು ಹೆಚ್ಚುತ್ತಿವೆ. ಈ ಪಾಶವೀ ಕತ್ಯದಿಂದ ಮಹಿಳೆಯರನ್ನು ಸಂರಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಕೆಗೊಳ್ಳುವ ಅವಶ್ಯಕತೆ ಇದೆ ಎಂದರು.
ಉದ್ಘಾಟಿಸಿ ಮಾತನಾಡಿದ ಪಾರ್ವತಿ ಅಭಿವದ್ಧಿ ಮಂಡಳದ ಅಧ್ಯೆ ಇಂದುಮತಿ ಮಾನ್ವಿ, ಉತಷ್ಟ ಸಂಸತಿಯ ಸಂವರ್ಧನೆಗಾಗಿ ಮಹಿಳೆ ಶ್ರಮಿಸುತ್ತಿದ್ದಾಳೆ. ಪುರುಷರಿಗಿಂತಲೂ ಸಾಧನೆಯಲ್ಲಿ ಹೆಣ್ಣು ಮಕ್ಕಳು ಮುಂದೆ ಇದ್ದಾರೆ ಎಂದು ತಿಳಿಸಿದರು.
ಸುಳ್ಳ ಪಂಚಗಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಅತಿಥಿಯಾಗಿದ್ದ ಶ್ರೀಮದ್ವೀರಶೆವ ಸದ್ಬೋಧನ ಸಂಸ್ಥೆಯ ಹುಬ್ಬಳ್ಳಿ ತಾಲೂಕು ಟಕದ ಅಧ್ಯ ಪ್ರಕಾಶ ಬೆಂಡಿಗೇರಿ ಮತ್ತು ಶ್ರೀ ಜಗದ್ಗುರು ರಂಭಾಪುರೀಶ ಸಾಂಸತಿಕ ಸೇವಾ ಸಂದ ಅಧ್ಯ ವಿಶ್ವನಾಥ ಹಿರೇಗೌಡರ ಮಾತನಾಡಿದರು.