ಹಿರಿಯರ ಸ್ಮರಣೆಯಿಂದ ಜೀವನ ಪಾವನ : ಸುಭಾಶ್ ರೈ ಅಭಿಮತ

New Project (24)
Published on

ಪುತ್ತೂರು ಗ್ರಾಮಾಂತರ: ಸ್ಮರಣೆಗೆ ಮರಣವಿಲ್ಲ ಎಂಬ ಮಾತಿದೆ. ನಾವು ನಮ್ಮ ಜೀವನದಲ್ಲಿ ಹಿರಿಯರನ್ನು ನೆನೆಯುವ ಕಾರ್ಯ ಮಾಡಿದಾಗ ನಮ್ಮ ಜೀವನ ಪಾವನವಾಗುತ್ತದೆ. ತಂದೆ, ತಾಯಿ, ಗುರು ಹಿರಿಯರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಸ್ವಾತಂತ್ರೃ ಹೋರಾಟಗಾರ ಎನ್.ಎಸ್.ಕಿಲ್ಲೆ ಪ್ರತಿಷ್ಠಾನ ಅಧ್ಯಕ್ಷ ಕಡಮಜಲು ಸುಭಾಶ್ ರೈ ಹೇಳಿದರು.

ಕುಂಬ್ರ ಹೇಮಾವತಿ ಸಂಕೀರ್ಣದಲ್ಲಿ ಕುಂಬ್ರದ ಮಂದಾರ ಬಳಗದ ‘ಮಂದಾರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಉದ್ಘಾಟಿಸಿದರು. ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಶ್ರಫ್ ಕಮ್ಮಾಡಿ, ಕೃಷಿ ಕ್ಷೇತ್ರದ ಸಾಧಕ ವಾಸು ಪೂಜಾರಿ ಗುಂಡ್ಯಡ್ಕ ಮತ್ತು ಹಿರಿಯ ನಾಗರಿಕರಾದ ಹೇಮಾವತಿ ರೈ ಕುಂಬ್ರ ಅವರಿಗೆ ಮಂದಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ ಅಭಿನಂದನಾ ಭಾಷಣ ಮಾಡಿದರು.

ಧಾರ್ಮಿಕ ಮುಖಂಡ ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಕುಂಬ್ರ ವರ್ತಕರ ಸಂಘ ಗೌರವ ಸಲಹೆಗಾರ ಪಿ.ಎಂ.ಅಬ್ದುಲ್ ರಹೀಮಾನ್ ಅರಿಯಡ್ಕ, ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಉದ್ಯಮಿಗಳಾದ ಮಹಮ್ಮದ್ ಸಾದಿಕ್ ಹಾಜಿ ಆಕರ್ಷಣ್, ಕುಂಬ್ರ ಮೋಹನದಾಸ ರೈ ಮಾತನಾಡಿದರು.

ಉದ್ಯಮಿಗಳಾದ ಯೂಸುಫ್ ಹಾಜಿ ಕೈಕಾರ, ಪುರಂದರ ರೈ ಕೋರಿಕ್ಕಾರು, ಕುಂಬ್ರ ಸ್ಪಂದನಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಉದ್ಯಮಿ ಅಕ್ಷಿತ್ ರೈ ಕುರಿಕ್ಕಾರ, ಹರ್ಷ ರೈ ಕುರಿಕ್ಕಾರ, ನಿವೃತ್ತ ಪೊಲೀಸ್ ಅಧಿಕಾರಿ ಬಾಲಚಂದ್ರ ರೈ, ನಿವೃತ್ತ ಸರ್ಕಾರಿ ಅಧಿಕಾರಿ ಪ್ರೇಮಾ ಬಿ.ರೈ, ಪಿ.ಕೆ.ಮೊಹಮ್ಮದ್, ಶಿವಕುಮಾರ್ ಬಾರಿತ್ತಾಯ ಬೆಳಾಲು ಉಪಸ್ಥಿತರಿದ್ದರು.

ಮಂದಾರ ಬಳಗದ ಸುಂದರ ರೈ ಮಂದಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನೇಮಾಕ್ಷ ಸುವರ್ಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net