

ಪಟ್ಟನಾಯಕನಹಳ್ಳಿ: ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಧರ್ಮ ಸಂಸ್ಥಾಪನೆಗಾಗಿ ವಿಷ್ಣುವು ಭೂಮಿಯಲ್ಲಿ ಕೃಷ್ಣನಾಗಿ ಅವತರಿಸಿದ ಹಬ್ಬವೇ ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬೇವಿನಹಳ್ಳಿಯಲ್ಲಿರುವ ಪುಣ್ಯಕೋಟಿ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಕೃಷ್ಣ ಪರಮಾತ್ಮಯದುಕುಲ ವಂಶಕ್ಕೆ ಸೇರಿದವನು, ವಿಷ್ಣುವಿನ 8ನೇ ಅವತಾರ. ಮಥುರ ನಗರದ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವ ದಂಪತಿಗಳಿಗೆ ಜನಿಸಿದನು ಎಂದು ಪುರಾಣಗಳು ಉಲ್ಲೇಖಿಸುತ್ತವೆ. ಕಾಡುಗೊಲ್ಲ ಸಮುದಾಯದ ಮೂಲ ಕಸುಬು ಕುರಿ ಕಾಯುವುದು. ಇತ್ತೀಚಿನ ದಿನಗಳಲ್ಲಿ ಕುರಿಗಾಹಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಪ್ರಕರಣಗಳು ದಾಖಲಾಗುತ್ತಿದ್ದು, ಕುರಿಗಾಗಿಗಳ ರಕ್ಷಣೆಗೆ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರ ವಿಶೇಷ ಕಾನೂನು ಜಾರಿಗೊಳಿಸಿದ್ದು, ಇದು ದೇಶದಲ್ಲೇ ಮೊದಲು ಎಂದರು.
ಶಿರಾ ತಾಲೂಕಿನ ತಾವರೆಕೆರೆ ಸಮೀಪದ ಚೀಲನಹಳ್ಳಿಯಲ್ಲಿ 20 ಎಕರೆ ಜಾಗದಲ್ಲಿ ಅತ್ಯಾಧುನಿಕ ವಧಾಗಾರ ನಿಮಾರ್ಣವಾಗಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಕುರಿ ಮತ್ತು ಮೇಕೆ ಮಾಂಸ ರ್ತನ್ನು ಈ ವಧಾಗಾರ ಉತ್ತೇಜಿಸಲಿದ್ದು, ಸ್ಥಳಿಯರಿಗೆ ಉದ್ಯೋಗ ಅವಕಾಶ ನೀಡುವ ಸಾಧ್ಯತೆ ಇದೆ. ಖಾಸಗಿ ಸಂಸ್ಥೆಯವರು ವಧಾಗಾರ ನಡೆಸಲು ಮುಂದೆ ಬಾರದೇ ಇದ್ದಲ್ಲಿ, ವಧಾಗಾರ ಮಾಡಲು ಗೊಲ್ಲ ಸಮುದಾಯಕ್ಕೆ ಸಂಸ್ಥೆಯೊಂದನ್ನು ಸ್ಥಾಪಿಸಿ ವ್ಯವಹರಿಸಲು ಅನುಕೂಲ ಮಾಡಿಕೊಡಲಾಗುವುದು ಎಂದರು.
ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಒಂದು ಸಮುದಾಯಕ್ಕೆ ಸೀಮಿತವಾಗಿ ಆಚರಿಸುವಂತಹದಲ್ಲ. ಮನುಕುಲಕ್ಕೆ ಭಗವದ್ಗೀತೆ ಸಾರುವ ಮೂಲಕ ಮನುಷ್ಯ ಹೇಗೆ ತನ್ನ ಬದುಕನ್ನ ನಡೆಸಬೇಕು, ಹುಟ್ಟು&ಸಾವಿನ ಮಧ್ಯೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಸಾರಾಂಶವನ್ನು ಶ್ರೀಕೃಷ್ಣ ಪರಮಾತ್ಮ ಸಾರಿಹೋಗಿದ್ದಾನೆ ಎಂದರು.
ಶ್ರೀಕೃಷ್ಣ ಗೊಲ್ಲಗಿರಿ ಚಿತ್ರದುರ್ಗ ಮಠದ ಶ್ರೀಕೃಷ್ಣ ಯಾದವನಂದಾ ಮಹಾಸ್ವಾಮಿ ಮಾತನಾಡಿ, ಪರಮಾತ್ಮ ಬಡವರ ಪರವಾಗಿ ಇರುವಂತ ದೇವರು, ಕೇವಲ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಿದರಷ್ಟೇ ಸಾಲದು ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಪಂ ಮಾಜಿ ಸದಸ್ಯ ಬೇವಿನಹಳ್ಳಿ ಸುದರ್ಶನ್, ಶಿರಾ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಹಾರೋಗೆರೆ ಮಹೇಶ್, ತಾಪಂ ಇಒ ಹರೀಶ್, ಗ್ರಾಮಾಂತರ ಸಿಪಿಐ ಶ್ರೀನಿವಾಸ್, ಪಿ.ಎಸ್.ಐ.ಚಂದ್ರಶೇಖರ್, ಬೇವಿನಹಳ್ಳಿ ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಮಹಾಲಕ್ಷಿ$್ಮ , ಮುಖಂಡರಾದ ಡಿ.ಎಂ.ಪಿ.ಕರಿಯಣ್ಣ, ಹನುಮಂತರಾಯ, ರೂಪೇಶ್ ಕೃಷ್ಣಯ್ಯ, ರಂಗನಾಥ್, ನಾಗರಾಜು ಮತ್ತಿತರರು ಇದ್ದರು.