ಮಂತ್ರ ಸಹಿತ ಯೋಗದಿಂದ ಬದುಕು ಸುಂದರ

pada pooje
Published on

ಅಕ್ಕಿಆಲೂರ: ಮಂತ್ರ ಸಹಿತ ಯೋಗವು ಮನುಷ್ಯನ ಬದುಕನ್ನು ಸಾತ್ವಿಕಗೊಳಿಸುತ್ತದೆ ಎಂದು ನಿವೃತ್ತ ಶಿಕ್ಷಕ ಸಿದ್ದಪ್ಪ ಮುಚ್ಚಂಡಿ ಹೇಳಿದರು.

ಪಟ್ಟಣದ ಸರ್ಕಾರಿ ಕನ್ನಡ ಶಾಲೆಯಲ್ಲಿ ಶ್ರೀ ಪತಂಜಲಿ ಉಚಿತ ಯೋಗ ಶಿಕ್ಷಣ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಮಾತೃ ಪಿತೃ ವಾತ್ಸಲ್ಯ ಭೋಜನ ಮತ್ತು ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವಕುಲಕ್ಕೆ ದಾರಿದೀಪವಾಗಿರುವ ಯೋಗವನ್ನು ತರಬೇತಿ ಕೊಡುವ ಮೂಲಕ ಕರ್ನಾಟಕದ ಎಲ್ಲ ಗ್ರಾಮಗಳಲ್ಲಿ ಉಚಿತವಾಗಿ ನೀಡುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯು ಸನಾತನ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುತ್ತಿದೆ. ಭಾರತದ ಯೋಗ, ಪ್ರಾಣಾಯಾಮವನ್ನು ವಿಶ್ವದ ವಿಜ್ಞಾನಿಗಳು ಒಪ್ಪಿದ್ದಾರೆ. ಯೋಗದಿಂದ ರೋಗಗಳನ್ನು ದೂರ ಮಾಡಬಹುದು ಎಂದು ಹೇಳಿದರು.

ಪಾದಪೂಜೆ ಸ್ವೀಕರಿಸಿದ ಹಿರಿಯರಾದ ಪಾರ್ವತಮ್ಮ ಮಳಗಿ ಮಾತನಾಡಿ, ಸಮಾಜಕ್ಕೆ ತಂದೆ, ತಾಯಂದಿರ ಮೌಲ್ಯ ತಿಳಿಸುವ ಕಾರ್ಯ ಮಾಡುತ್ತಿರುವ ಪತಂಜಲಿ ಯೋಗ ಶಿಕ್ಷಣ ತರಬೇತಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ನಿತ್ಯ ಬ್ರಾಹ್ಮೀ ಮುಹೂರ್ತದಿಂದ ನಡೆಯುವ ಯೋಗ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳು, ವಿವಿಧ ಬಗೆಯ ಅಡುಗೆ ಮಾಡಿ ಜನತೆಗೆ ಉಣಬಡಿಸಿದರು. ನಂತರ ಹಿರಿಯರಾದ ಸಿದ್ದಪ್ಪ ಮುಚ್ಚಂಡಿ, ಪಾರ್ವತೆವ್ವ ಮಳಗಿ, ರಾಜೇಶ್ವರಿ ಮೋಟಗಿ, ಶೈಲಮ್ಮ ಹುಣಸಿಕಟ್ಟಿ ಅವರ ಪಾದಪೂಜೆ ಮಾಡಲಾಯಿತು.

ಬಸವರಾಜ ಗೊಂದಿ, ವಿನಾಯಕ ಬಳ್ಳಾರಿ, ಮುತ್ತಪ್ಪ ಮುಚ್ವಂಡಿ, ಸಚಿನ ತಟ್ಟಿ, ಈರಣ್ಣ ಕೆರಿಮನೆ, ಚನ್ನವೀರ ಬೆಲ್ಲದ, ಸುರೇಶ ಹೆಬ್ಬಾರ, ನಂದಿನಿ ವಿರಪ್ಪಣ್ಣನವರ, ನಿರ್ಮಲ ಪೂಜಾರ, ಕವಿತಾ ಮೋಟಗಿ, ವಿಶಾಲಾ ಚುಳಕಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net