ಶಿಕ್ಷಣ, ಸಂಸ್ಕಾರದಿಂದ ಬದುಕು ಸುಂದರ

Life is beautiful with education and culture.
ಬಾದಾಮಿಯ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಮಾತೋಶ್ರೀ ನೀಲಮ್ಮ ಶಿವಪ್ಪ ಬ್ಯಾಳಿ ಕನ್ನಡ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ನಾಮಕರಣವನ್ನು ಗಣ್ಯರು ಅನಾವರಣಗೊಳಿಸಿದರು.
Published on

ಬಾದಾಮಿ: ಕಳೆದ 5 ದಶಕಗಳ ಹಿಂದೆ ಶಿಕ್ಷಣ, ಆರೋಗ್ಯಕ್ಕಾಗಿ ಭೂದಾನ ಮಾಡಿದ್ದಲ್ಲದೆ, ಜೀವನ ತ್ಯಾಗ ಮಾಡಿದ ಮಹನಿಯರಿದ್ದಾರೆ. ಅವರ ದಾನದಿಂದಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣ ಇಷ್ಟೊಂದು ಬೆಳೆಯಲು ಸಾಧ್ಯವಾಯಿತು ಎಂದು ಸಾಹಿತ್ಯ ಅಕಾಡಮಿ ಸದಸ್ಯೆ ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ಇಲ್ಲಿನ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಮಂಟಪದಲ್ಲಿ ಬುಧವಾರ ಕನ್ನಡ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಮಾತೋಶ್ರೀ ನೀಲಮ್ಮ ಶಿವಪ್ಪ ಬ್ಯಾಳಿ ನಾಮಕರಣ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಸಂಸ್ಥೆ ಚೇರ್ಮನ್ ಎ.ಸಿ. ಪಟ್ಟಣದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರ ದೂರದೃಷ್ಠಿಯಿಂದ 69 ವರ್ಷಗಳವರೆಗೆ ಸದೃಢ ಮತ್ತು ಬಹು ವಿಸ್ತಾರತೆಯಲ್ಲಿ ವೀರಪುಲಿಕೇಶಿ ವಿದ್ಯಾ ಸಂಸ್ಥೆ ಬೆಳೆಯುತ್ತಿದೆ. ಹಿರಿಯರಿಗೆ ವಿದ್ಯೆ ಇಲ್ಲದೆ ಅನುಭವದ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಪ್ರೇರಣೆ ಸದಾಶಿವ ಶ್ರೀ, ಮುಧೋಳದ ಮೃತ್ಯುಂಜಯ ಶ್ರೀಗಳಿಂದ ದಿ. ಕೆ.ಎಂ. ಪಟ್ಟಣಶೆಟ್ಟಿ ಅವರ ಮೂಲಕ ಸಾಧ್ಯವಾಗಿದೆ. ಜನತೆ ಶಿಕ್ಷಣ ಪಡೆದು ಸುಶಿಕ್ಷಿತರಾಗಿ ಸಂಸ್ಥೆಗೆ ದಾನ ಮಾಡುವ ಮೂಲಕ ಔದಾರ್ಯತೆ ತೋರಬೇಕು ಎಂದರು.

ಅಭಿನವ ಒಪ್ಪತ್ತೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಸಂಸ್ಥೆ ನಿರ್ದೇಶಕ ಜೆ.ಎಸ್.ಮಮದಾಪೂರ ಮಾತನಾಡಿದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸುಭಾಸ ಆರ್. ಮೆಳ್ಳಿ ಹಾಗೂ ಬ್ಯಾಳಿ ದಂಪತಿಯನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಅಶೋಕ ಕಲ್ಯಾಣಶೆಟ್ಟಿ, ಹೇಮಾ ಬ್ಯಾಳಿ, ಆರ್.ಎಸ್. ಬ್ಯಾಳಿ ಉಪಸ್ಥಿತರಿದ್ದರು. ಶ್ರೀಧರ ತ್ತೇಪೂರ ಸ್ವಾಗತಿಸಿದರು. ಸಂಗೀತಾ ಪಾಟೀಲ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net