

ಉಪ್ಪಿನಂಗಡಿ: ಧಾರ್ಮಿಕ ಆಚರಣೆಗಳ ಮಹತ್ವ ಅರಿತು ಬದುಕಿನಲ್ಲಿ ಧರ್ಮಾಚರಣೆ ಕೈಗೊಂಡಾಗ ಜೀವನ ಸುಂದರವೆನಿಸುವುದು. ನಾವು ಧರ್ಮವನ್ನು ರಕ್ಷಿಸಿದಾಗ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಗುರುವಾರ ಆಶೀರ್ವಚನ ನೀಡಿದರು.
ಧಾರ್ಮಿಕ ಉಪನ್ಯಾಸ ನೀಡಿದ ಕಾರ್ತಿಕ ತಂತ್ರಿ ಮಾತನಾಡಿ, ಪ್ರತಿಯೊಂದು ಜೀವಿಯ ಹೃದಯದಲ್ಲಿ ಭಗವಂತ ನೆಲೆಸಿದ್ದರೂ, ಭಗವಂತನನ್ನು ನಮಗೆ ಕಾಣಲು ಸಾಧ್ಯವಿಲ್ಲ. ನಮ್ಮ ರೂಪವನ್ನು ನೋಡಲು ನಮಗೆ ಹೇಗೆ ದರ್ಪಣದ ಅವಶ್ಯಕತೆ ಇದೆಯೋ, ಅದೇ ರೀತಿ ಭಗವಂತನನ್ನು ಬಿಂಬ ಮೂಲಕ ಉಪಾಸನೆ ಮಾಡಿ, ಧ್ಯಾನ, ಪೂಜೆ, ತಪಸ್ಸು, ಭಜನೆಯ ಮೂಲಕ ಕಾಣಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮದ ಆಚರಣೆ ಶೇ.100 ಅನುಷ್ಠಾನವಾದಾಗ ಮಾತ್ರ ದೇಶ, ಸನಾತನ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ. ಸ್ವಾಮೀಜಿಗಳ ತೇಜೋವಧೆ, ಭಜಕರ ನಿಂದನೆ, ಧರ್ಮದ ಮೇಲೆ ಆಕ್ರಮಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಧರ್ಮರಕ್ಷಣೆಗೆ ಪ್ರತಿಯೋರ್ವರೂ ಸನ್ನದ್ಧರಾಗಬೇಕಾಗಿದೆ ಎಂದರು.
ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಉದಯಶಂಕರ ಭಟ್ಟ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷ ಡಿ.ಚಂದಪ್ಪ ಮೂಲ್ಯ, ಆಡಳಿತ ಸಮಿತಿ ಉಪಾಧ್ಯಕ್ಷ ಸುರೇಶ ಅತ್ರೆಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಜತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ಚಂದ್ರ ಮೊಗ್ರಾಲ್ ಕುವೆಚ್ಚಾರು, ಬಿ.ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೊಕೇಶ ಪೂಜಾರಿ ಬೆತ್ತೋಡಿ, ಜತ್ತಪ್ಪ ನಾಯ್ಕ ಬೊಳ್ಳಾವು, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಡಾ.ರಾಜಾರಾಮ ಕೆ.ಬಿ, ಉಷಾಚಂದ್ರ ಮುಳಿಯ, ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮಾ ಪದಾಳ, ಜತೆ ಕಾರ್ಯದರ್ಶಿ ಲಕ್ಷ್ಮಣ ಗೌಡ ನೆಡ್ಚಿಲು, ಸುರೇಶ ಗೌಂಡತ್ತಿಗೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ, ಸುನೀಲ್ ಕುಮಾರ್ ದಡ್ಡು, ಧರ್ನಪ್ಪ ನಾಯ್ಕ, ಹರೀಶ್ವರ ಮೊಗ್ರಲ್, ಶಂಕರನಾರಾಯಣ ಭಟ್, ಪ್ರಶಾಂತ್ ಪೆರಿಯಡ್ಕ, ಲೊಕೇಶ್ ಬೆತ್ತೋಡಿ, ಬಿ.ರಾಧಾಕೃಷ್ಣ ಭಟ್, ಪ್ರಸನ್ನ ಪೆರಿಯಡ್ಕ, ಪುಷ್ಪವಲ್ಲಿ, ಚಿದಾನಂದ ಪಂಚೇರು, ಕಂಗ್ವೆ ವಿಶ್ವನಾಥ ಶೆಟ್ಟಿ, ಉದಯ ಅತ್ರೆಮಜಲು ಮತ್ತಿತರರು ಉಪಸ್ಥಿತರಿದ್ದರು.
ಉದಯಶಂಕರ ಭಟ್ಟ ಸ್ವಾಗತಿಸಿದರು. ಡಿ.ಚಂದಪ್ಪ ಮೂಲ್ಯ ವಂದಿಸಿದರು. ಲೊಕೇಶ ಬೆತ್ತೋಡಿ, ಅವನೀಶ್ ಹಾಗೂ ಮಹಾಲಿಂಗೇಶ್ವರ ಭಟ್ ಮಧುವನ ಕಾರ್ಯಕ್ರಮ ನಿರೂಪಿಸಿದರು.
ಗೌರವಾರ್ಪಣೆ
ಶ್ರೀದೇವರ ಪಲ್ಲಕಿಗೆ ಮರಗಳನ್ನು ನೀಡಿ ಸಹಕರಿಸಿದ ಧರ್ನಪ್ಪ ಗೌಡ ನೆಡ್ಚಿಲು, ಪ್ರತಾಪ್ ಪೆರಿಯಡ್ಕ, ವಸಂತ ಕುಕ್ಕೆಶ್ರೀ ಅವರನ್ನು ಸನ್ಮಾನಿಸಲಾಯಿತು. ವಿಜಯ ಶಿಲ್ಪಿ ಕುಕ್ಕುಜೆ, ನವೀನ್ ಕುಮಾರ್ ಕಲ್ಯಾಟೆ ಅವರನ್ನು ಗೌರವಿಸಲಾಯಿತು.
ದೈವ ಸಂಕಲ್ಪವಿದ್ದಾಗ ಮಾತ್ರ ಎಲ್ಲವೂ ನಡೆಯಲು ಸಾಧ್ಯ. ನಮ್ಮ ಸನಾತನ ಹಿಂದು ಧರ್ಮದ ಭಾರತೀಯ ಸಂಸ್ಕೃತಿಯು ಶುದ್ಧ ನೀರಿನಂತಿದ್ದು, ಇದರಿಂದ ನಮಗೆ ಶಾಂತಿ- ನೆಮ್ಮದಿಯ ಬದುಕು ಸಾಧ್ಯ. ಆದರೆ ವಿದೇಶಿ ಸಂಸ್ಕೃತಿ ಹಾಲಿನಂತೆ. ಹಾಲಿನಲ್ಲಿ ಮೀನನ್ನು ಹಾಕಿದರೆ ಹೇಗೆ ಅದು ಬದುಕುಳಿಯಲು ಸಾಧ್ಯವಿಲ್ಲವೋ, ಹಾಗೆಯೇ ವಿದೇಶಿ ಸಂಸ್ಕೃತಿಯಲ್ಲಿ ಕ್ಷಣಿಕ ಖುಷಿ ಕೊಟ್ಟರೂ ನೆಮ್ಮದಿಯ ಜೀವನ ಅದರಲ್ಲಿ ದೊರೆಯಲು ಸಾಧ್ಯವಿಲ್ಲ. ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠ