ಒಳ್ಳೆಯ ನಡತೆಯಿದ್ದರೆ ಬದುಕು ಸುಂದರ

2-SGN-1 PRATHIBHA
Published on

ಶಿಗ್ಗಾಂವಿ: ಪ್ರಾಥಮಿಕ ಶಿಕ್ಷಣವೂ ಮಾನವೀಯ ಮೌಲ್ಯಗಳನ್ನು ತಿಳಿಸುವುದರೊಂದಿಗೆ ಮುಂದಿನ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ವಿದ್ಯಾರ್ಥಿ ಜೀವನವನ್ನು ಜಾಣ್ಮೆ ಹಾಗೂ ಒಳ್ಳೆಯ ನಡತೆಯಿಂದ ಸಾಗಿಸಿದರೆ ಬದುಕಿನುದ್ದಕ್ಕೂ ಸುಖಕರ ಜೀವನ ನಡೆಸಬಹುದು ಎಂದು ಗಂಜಿಗಟ್ಟಿ ಚರಮೂರ್ತೆಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಮಂಟಪದಲ್ಲಿ ರಾಜು ಎಂ. ಕುನ್ನೂರ ಅವರ ಅಭಿಮಾನಿ ಬಳಗ ಹಾಗೂ ಕುನ್ನೂರ ಫೌಂಡೇಷನ್ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ರಸಮಂಜರಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಇಂಥ ಪುರಸ್ಕಾರಗಳು ವಿದ್ಯಾರ್ಥಿಗಳ ಭವಿಷ್ಯದ ಬಾಳು ರೂಪಿಸಲು ಸಹಕಾರಿಯಾಗಿವೆ ಎಂದರು.

ಬಂಕಾಪುರ ಅರಳೆಲೆ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಬದುಕು ಕಟ್ಟುವುದಕ್ಕಾಗಿ ಹೋರಾಟ, ಕಟ್ಟಿದ್ದನ್ನು ಬೆಳೆಸುವುದಕ್ಕಾಗಿ ಹೋರಾಟ, ಬೆಳೆಸಿದ್ದನ್ನು ಉಳಿಸುವುದಕ್ಕಾಗಿ ಹೋರಾಟ ಇಂಥ ಹೋರಾಟದ ಬದುಕಲ್ಲಿ ಒಳ್ಳೆಯ ಕೆಲಸ, ಕಾರ್ಯಗಳ ಮೂಲಕ ಸಮಾಜಮುಖಿಯಾಗುತ್ತಿರುವ ರಾಜು ಕುನ್ನೂರ ಅಭಿನಂದನಾರ್ಹರು ಎಂದರು.

ಹಜರತ್ ಮೌಲಾನಾ ಶಬ್ಬೀರ್ ಅಹ್ಮದ್ ಆಶರಫೀ ಹಾಗೂ ರಾಜು ಕುನ್ನೂರ, ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಅಧ್ಯಕ್ಷತೆ ವಹಿಸಿದ್ದರು. ವೀರೇಶ ಆಜೂರ, ವೀರಣ್ಣ ಬಡ್ಡಿ, ಫಕೀರಜ್ಜ ಯಲಿಗಾರ, ಶಿವಪುತ್ರಪ್ಪ ಜಕ್ಕಣ್ಣವರ, ಚಂದ್ರಣ್ಣ ನಡುವಿನಮನಿ, ಮುತ್ತಣ್ಣ ಪಾಟೀಲ, ದುಂಡಪ್ಪ ಮಾಸನಕಟ್ಟಿ, ಬಸವರಾಜ ಕುರಗೋಡಿ, ದುಂಡಪ್ಪ ರಾಯಣ್ಣವರ, ಫಕೀರಪ್ಪ ಕುಂದೂರ, ಯಲ್ಲಪ್ಪ ತಳವಾರ, ವೀರೇಶ ಸೊಬರದ, ಶಿವಾನಂದ ಗಾಣಿಗೇರ, ಸಾದಿಕ ಮಲ್ಲೂರ, ಪೀರಸಾಬ್ ನದಾಫ, ಇತರರಿದ್ದರು.

ತಾಲೂಕಿನ ಎಲ್ಲ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ನೂರಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜ್ಯೂ. ರಾಜಕುಮಾರ, ಜ್ಯೂ. ಪುನೀತ್ ರಾಜಕುಮಾರ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಪ್ರೊ. ಕೆ. ಬಸಣ್ಣ, ಕೆ.ಜಿ. ಮಲ್ಲೂರ, ಶಿಕ್ಷಕಿ ಆಸ್ಮಾ ಕಲಾಯಗಾರ ಹಾಗೂ ಡಾ. ಕೆ.ಎಸ್. ಬರದೆಲಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net