ಸವಾಲು ಎದುರಿಸಿ ಮುನ್ನಡೆಯುವುದೇ ಜೀವನ; ಶ್ರೀನಿವಾಸಪ್ರಭು ಅಭಿಮತ, ಆಶಾ ರಘು ಕೃತಿಗಳ ಲೋಕಾರ್ಪಣೆ

asha
Published on

ಬೆಂಗಳೂರು :ಬದುಕಿನಲ್ಲಿ ಸವಾಲು ಬರುವುದು ಸಹಜ. ಅಂತಹ ಸವಾಲುಗಳನ್ನು ಎದುರಿಸಿ ಮುನ್ನಡೆಯುವುದೇ ಜೀವನ ಎಂದು ಹಿರಿಯ ನಟ ಶ್ರೀನಿವಾಸ ಪ್ರಭು ಹೇಳಿದ್ದಾರೆ.

ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಉಪಾಸನ ಪ್ರಕಾಶನ ಆಯೋಜಿಸಿದ್ದ ಲೇಖಕಿ ಆಶಾ ರಘು ಅವರ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಷ್ಟ, ಕಣ್ಣೀರು ಇವು ಬದುಕಿನ ಪರ್ಯಾಯ ಪದಗಳು. ಎಷ್ಟು ಕಷ್ಟ ಅನುಭವಿಸುತ್ತೇವೋ ಜೀವನ ಅಷ್ಟು ಗಟ್ಟಿಯಾಗುತ್ತದೆ. ಉಳಿಯ ಪೆಟ್ಟು ಬಿದ್ದರೆ ಕಲ್ಲು ಮೂರ್ತಿಯಾಗುತ್ತದೆ. ಕಣ್ಣೀರು ಸುರಿದಾಗ ಕಣ್ಣಿನಲ್ಲಿರುವ ಕಾಡಿಗೆ ಹೋಗಬೇಕೆ ವಿನಃ ಕಣ್ಣೊಳಗಿರುವ ಕನಸುಗಳಲ್ಲ. ಬಂದ ಎಲ್ಲ ಸವಾಲುಗಳನ್ನು ಎದುರಿಸುವುದು, ಸಮಸ್ಯೆಗಳ ವಿರುದ್ಧ ಹೋರಾಡುವುದು, ಅಂದುಕೊಂಡದ್ದನ್ನು ಸಾಧಿಸಿ ಜೀವನದಲ್ಲಿ ಗೆಲುವುದು ಸಾಧಿಸುವುದು ಮುಖ್ಯ. ಇದಕ್ಕೆ ಉತ್ತಮ ಉದಾಹರಣೆ ಲೇಖಕಿ ಆಶಾ ರಘು. ಅದಕ್ಕೆ ಸಾಕ್ಷಿ ಅವರು ಬರೆದಿರುವ ಪುಸ್ತಕಗಳು. ಹಿಂದೆ ಲೇಖಕರು ಹಸ್ತಪ್ರತಿ ಹಿಡಿದು ಪ್ರಕಟಣೆಗಾಗಿ ಓಡಾಡುತ್ತಿದ್ದರು. ಆದರೆ ಈಗ ಹಲವು ಪ್ರಕಾಶಕರು ಉತ್ತಮ ಕೃತಿಗಳ ಪ್ರಕಟಣೆಗೆ ಮುಂದಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಸದ್ಯ ಸುವರ್ಣಯುಗ ಎನ್ನಬಹುದು. ಆದ್ದರಿಂದ ಸಮಾಜಮುಖಿ ಕಾವ್ಯ ಸೃಷ್ಟಿಯಲ್ಲಿ ಹಲವರು ತೊಡಗಿದ್ದಾರೆ. ಅಂತಹವರಲ್ಲಿ ಆಶಾ ಪ್ರಮುಖರು. ಎಂದು ಶ್ರೀನಿವಾಸ ಪ್ರಭು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಲಿಂಗರಾಜ ಸೊಟ್ಟಪ್ಪನವರ, ಸಾಹಿತಿ ಸುಮಾ ಸತೀಶ್, ಲೇಖಕಿ ಆಶಾ ರಘು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net