ರಾಗಿ ಬೆಳೆಯಲ್ಲಿ ಜೀವ ಕಳೆ

ragi
Published on

ಬೂದಿಕೋಟೆ: ಮಳೆರಾಯನ ಮುನಿಸಿನಿಂದ ಜಿಲ್ಲೆಯಲ್ಲಿ ಒಣಗುತ್ತಿದ್ದ ರಾಗಿ ಬೆಳೆಗೆ ಮರು ಜೀವ ಬಂದಿದ್ದು, ಇತ್ತೀಚೆಗೆ ಸುರಿದ ಮಳೆಯಿಂದ ಎಲ್ಲೆಡೆ ಹಚ್ಚ ಹಸಿರು ಹೆಚ್ಚಿದೆ.

ಬಂಗಾರಪೇಟೆ ತಾಲೂಕಿನಲ್ಲಿ ಎರಡು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ರಾಗಿ ಹಾಗೂ ಇತರ ಬೆಳೆಗಳು ಕೈ ಕೊಟ್ಟಿದ್ದವು. ಇದರಿಂದ ರೈತರು ಬೆಳೆಗೆ ಹಾಕಿದ ಬಂಡವಾಳ ತೆಗೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಉತ್ತಮ ಮಳೆ ಹಾಗೂ ಬೆಳೆ ನಿರೀೆಯಲ್ಲಿದ್ದ ರೈತರು ತಾಲೂಕಿನಾದ್ಯಾಂತ 14,899 ಹೆಕ್ಟೇರ್​ ಪ್ರದೇಶದಲ್ಲಿ ರಾಗಿ, ಸಾವಿರಾರು ಹೆಕ್ಟೇರ್​ ಪ್ರದೇಶದಲ್ಲಿ ನೆಲಗಡಲೆ, ಅವರೆ, ತೊಗರಿ ಸೇರಿ ಇತರ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದರು. ಆದರೆ, ಈ ಬಾರಿಯೂ ಸಮರ್ಪಕ ಮಳೆಯಾಗದ ಕಾರಣ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದವು.

ಪ್ರಾರ್ಥನೆ ಲಿಸಿತು

ಕೆಲ ರೈತರು ಬೆಳೆ ಕಾಪಾಡಲು ಟ್ಯಾಂಕರ್​ ಮೂಲಕ ನೀರು ಪೂರೈಸಿದರೆ, ಇನ್ನೂ ಕೆಲವರು ಪಂಪ್​ಸೆಟ್​ ಮೊರೆಹೋಗಿದ್ದರು. ಆದರೆ, ನೀರಿನ ಮೂಲ ಇಲ್ಲದ ಹಾಗೂ ಆರ್ಥಿಕವಾಗಿ ಹಿಂದುಳಿದ ರೈತರು ಮಳೆರಾಯನಿಗಾಗಿ ದೇವರ ಮೊರೆ ಇಟ್ಟಿದ್ದರು. ಗ್ರಾಮೀಣ ಭಾಗದಲ್ಲಿ ಮಳೆರಾಯನ ಪ್ರತಿಮೆ ಪ್ರತಿಷ್ಠಾಪಿಸಿ ಪೂಜಿಸಿದರು.

ಪ್ರಾರ್ಥನೆ ಲಿಸಿ ಮುನಿಸಿಕೊಂಡಿದ್ದ ವರುಣ ಕೃಪೆ ತೋರಿದ್ದು, ಹಲವು ದಿನಗಳಿಂದ ಧಾರಾಕಾರವಾಗಿ ಮಳೆಯಾಗಿ ಬೆಳೆಗಳಿಗೆ ಜೀವ ಕಳೆ ಬಂದಿದೆ.

ಚಿಗುರೊಡೆದ ಆಸೆ

ಮಳೆಯಿಲ್ಲದೆ ಒಣಗುತ್ತಿದ್ದ ರಾಗಿ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ತೆನೆ ಕಾಳು ಕಟ್ಟುವ ಹಂತಕ್ಕೆ ಬಂದಿದೆ. ಈ ಬಾರಿ ಮಳೆಯಿಲ್ಲದೆ ರಾಗಿ ಮನೆ ಸೇರುವುದಿಲ್ಲ ಎಂದು ನಿರಾಸೆಯಲ್ಲಿದ್ದ ರೈತರಲ್ಲಿ ಉತ್ತಮ ಸಲಿನ ಆಸೆ ಚಿಗುರೊಡೆದಿದೆ. ದೀಪಾವಳಿ ನಂತರ ಒಂದಿಷ್ಟು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆಯಾದರೆ ಉತ್ತಮ ಸಲು ಅನ್ನದಾತನ ಮನೆ ಸೇರುವುದರಲ್ಲಿ ಅನುಮಾನವಿಲ್ಲ ಎಂಬುದು ರೈತರ ಅಭಿಪ್ರಾಯವಾಗಿದೆ.

"ಈ ಬಾರಿ ಸಮರ್ಪಕವಾಗಿ ಮಳೆಯಾಗದ ಕಾರಣ ರಾಗಿ ಸೇರಿ ಇತರ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದವು. ಆದರೆ, ವಾಯುಭಾರ ಕುಸಿತದಿಂದ ಮಳೆಯಾಗಿ ಬೆಳೆಗಳು ಪುನ@ ಜೀವ ಪಡೆದುಕೊಂಡಿವೆ. ಅದೇ ಸಮಯಕ್ಕೆ ತಾಲೂಕಿನಲ್ಲಿ ಗೊಬ್ಬರದ ಸಮಸ್ಯೆಯಾಗಿತ್ತು. ರೈತರು ತಲೆ ಮೇಲೆ ಕೈ ಹೊತ್ತು ಕೂರುವ ಸಂದರ್ಭದಲ್ಲಿ ಗೊಬ್ಬರದ ಸಮಸ್ಯೆ ಬಗೆಹರಿದು ಈಗ ಉತ್ತಮ ಬೆಳೆಯ ನಿರೀೆಯಲ್ಲಿದ್ದೇವೆ."

- ಮಂಜುನಾಥ್​

ರೈತ

"ತಾಲೂಕಿನಲ್ಲಿ ರೈತರು ಉತ್ತಮ ಬೆಳೆ ಹಾಗೂ ಇಳುವರಿ ನಿರೀೆಯಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಉತ್ತಮ ಮಳೆಯಾದರೂ ನಂತರದ ದಿನಗಳಲ್ಲಿ ಮಳೆ ಕೈಕೊಟ್ಟು ನಿರಾಸೆ ಉಂಟು ಮಾಡಿತು. ಆದರೆ, ಕಳೆದ ಹಲವು ದಿನಗಳ ಕಾಲ ಸುರಿದ ಜಡಿ ಮತ್ತು ತುಂತರು ಮಳೆಗೆ ರಾಗಿ ಬೆಳೆ ಕಾಳು ಕಟ್ಟುವ ಹಂತಕ್ಕೆ ತಲುಪಿದೆ. ಉತ್ತಮ ಇಳುವರಿಯ ನಿರೀೆಯಲ್ಲಿ ರೈತರೂ ಮತ್ತು ಕೃಷಿ ಇಲಾಖೆೆ ಇದೆ."

-ಪ್ರತಿಭಾ, ಸಹಾಯಕ ಕೃಷಿ ನಿರ್ದೇಶಕಿ, ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net