ಜೀವ ವಿಮೆ ಷೇರು ಮಾರಾಟ ಕ್ರಮ ಸಲ್ಲ, ವಿಮಾ ನೌಕರರು ಮತ್ತು ಪ್ರತಿನಿಧಿಗಳ ಸಂಘ ಖಂಡನೆ

040220 Gangavati LIC Employees Protest
Published on

ಗಂಗಾವತಿ: ಜೀವ ವಿಮೆ ಷೇರು ಮಾರಾಟ ಕ್ರಮ ಖಂಡಿಸಿ ವಿಮಾ ನೌಕರರ ಸಂಘಟನೆ, ಅಭಿವೃದ್ಧಿ ಅಧಿಕಾರಿಗಳು, ಆಡಳಿತಾಧಿಕಾರಿಗಳ ಸಂಘಟನೆ ಮತ್ತು ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ಸದಸ್ಯರು ನಗರದ ಎಲೈಸಿ ಕಚೇರಿ ಮುಂದೆ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ಸಂಘದ ಮುಖಂಡ ಗಂಗಾಧರಸ್ವಾಮಿ ಮತ್ತು ಸುರೇಶ ಮಾತನಾಡಿ, ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಎಲೈಸಿ ಷೇರುಗಳ ಮಾರಾಟದ ಪ್ರಸ್ತಾಪ ಮಾಡಿದ್ದು ಖಂಡನೀಯ ಹಾಗೂ ಖಾಸಗೀಕರಣಗೊಳಿಸುವುದು ಸರಿಯಲ್ಲ. ಕೇಂದ್ರ ಸರ್ಕಾರಕ್ಕೆ ಎಲೈಸಿಯಿಂದ ಕೋಟ್ಯಂತರ ರೂ.ಲಾಭಾಂಶ ನೀಡುತ್ತಿದ್ದು, ಜನರ ದುಡ್ಡು ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕಿದೆ. ಪಂಚವಾರ್ಷಿಕ ಯೋಜನೆಗೆ ಎಲೈಸಿ ಸಂಗ್ರಹಿಸಿದ ಜನರ ಹಣ ಬಳಕೆ ಮಾಡಲಾಗುತ್ತಿದೆ. ಸರ್ಕಾರ ತನ್ನ ಪಾಲಿನ ಷೇರುಗಳನ್ನು ಖಾಸಗಿಯವರಿಗೆ ಮಾರಾಟಕ್ಕೆ ಹುನ್ನಾರ ನಡೆಸಿದ್ದು ಸಲ್ಲ. ದೇಶದ 30 ಕೋಟಿ ಜನರಿಗೆ ವಿಮೆ ಸುರಕ್ಷತೆ ನೀಡಿದ್ದು, 15ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳಿಗೆ ಅನುಕೂಲವಾಗಿದೆ. ವಿಮೆ ನಿಗಮದ ಖಾಸಗೀಕರಣ ಕೈ ಬಿಡುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ರಾಮಣ್ಣ, ಜೆ.ಸಿ.ಜಾಧವ್, ಲಕ್ಷ್ಮಿನಾರಾಯಣ, ಕುರಿರಾಮಣ್ಣ, ಗೋಪಾಲಕೃಷ್ಣ, ಹನುಮಂತಪ್ಪ, ನರೇಶ, ಶ್ರೀಲತಾ, ವೀಣಾ, ಅಂಜಿನಮ್ಮ, ಕಿಶನರಾವ್, ರಮೇಶ ಭಟ್, ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳಾದ ನಿಂಗಜ್ಜ, ವಲಿಮೊಹಿದ್ದೀನ್, ಖಾಜಾವಲಿ, ರಾಘವೇಂದ್ರ ದೇಸಾಯಿ, ನಿಜಲಿಂಗಪ್ಪ, ಬಸವರಾಜ ಸಜ್ಜನ್, ಎಚ್.ಈಶ್ವರ, ಬಸವಣ್ಣೆಯ್ಯ, ಕಲ್ಯಾಣ ಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net