ಜೀವ ವಿಮಾ ಪ್ರತಿನಿಧಿಗಳಿಂದ ಪ್ರತಿಭಟನೆ

udp-9-lic
Published on

ಉಡುಪಿ: ಕಮಿಷನ್​ ದರದ ಪುನರ್​ ರಚನೆಯ ಹೆಸರಿನಲ್ಲಿ ನಿಗಮದ ಆಡಳಿತ ಮಂಡಳಿ ಪ್ರತಿನಿಧಿಗಳ ಒಟ್ಟಾರೆ ಕಮಿಷನ್​ ಗಳಿಕೆ ಕಡಿತಗೊಳಿಸಿದೆ. ಇದರಿಂದ ಹೆಚ್ಚು ಪಾಲಿಸಿ ಮಾರಾಟ ಮಾಡುವ ಪ್ರತಿನಿಧಿಗಳನ್ನು ನಿರುತ್ಸಾಹಗೊಳಿಸುತ್ತದೆ. ಎಲ್ಲಾ ಪ್ರತಿನಿಧಿಗಳಿಗೆ ಸಮಾನವಾದ ಕಮಿಷನ್​ ದರವನ್ನು ನೀಡುವ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಎಲ್​ ಐ ಸಿ ಉಡುಪಿ ವಿಭಾಗೀಯ ಕೌನ್ಸಿಲ್​ನ ಅಧ್ಯಕ್ಷ ಎ. ವಿಶ್ವನಾಥ್​ ಗಟ್ಟಿ ವಗ್ಗ ಆಗ್ರಹಿಸಿದರು.

ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಫೆಡರೇಶನ್​ ಉಡುಪಿ ವಿಭಾಗದ ನೇತೃತ್ವದಲ್ಲಿ ಜೀವ ವಿಮಾ ಪ್ರತಿನಿಧಿಗಳು ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಸೋಮವಾರ ನಡೆದ ಧರಣಿ ಸಭೆಯಲ್ಲಿ ಮಾತನಾಡಿದರು.

ಕನಿಷ್ಠ ವಿಮಾ ಮೊತ್ತ 1 ಲಕ್ಷ ರೂ. ಮರುಜಾರಿ, ವಿಮಾ ಪಾಲಿಸಿ ಖರೀದಿಗೆ ಗರಿಷ್ಠ ವಯೋಮಿತಿ ಏರಿಕೆ, ಪ್ರೀಮಿಯಂ ಜಿಎಸ್​ಟಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜೀವವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ರಾಜೇಶ್​ ಮುಧೋಳ್​ ಅವರಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ವಿಭಾಗೀಯ ಕೌನ್ಸಿಲ್​ನ ಕಾರ್ಯದರ್ಶಿ ಎಚ್​. ಸುಬ್ರಹ್ಮಣ್ಯ ಭಟ್​, ಕೋಶಾಧಿಕಾರಿ ಗಂಗಾಧರ್​ ಎನ್​. ಕೋಟ್ಯಾನ್​, ಕಾರ್ಯಕಾರಿ ಮಂಡಳಿಯ ಕಾಶಿನಾಥ ಪುತ್ರನ್​, ಮಾಜಿ ಅಧ್ಯಕ್ಷ ಮುರುಳೀಧರ್​ ಡಿ.ವಿ., ಶೇಖರ್​ ಪೂಜಾರಿ, ವಂದನಾ ವಿಶ್ವನಾಥ, ಉಡುಪಿ ಶಾಖಾ ಅಧ್ಯಕ್ಷ ರಮೇಶ್​ ಆಚಾರ್ಯ ಯು., ಕೋಶಾಧಿಕಾರಿ ಜಗದೀಶ್​ ಶೆಟ್ಟಿ, ಗಣೇಶ್​ ಮೇಸ್ತ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net