

ಅಳವಂಡಿ: ವ್ಯಕ್ತಿ ಬೆಳವಣಿಗೆ ಆತನ ಆಚಾರ, ವಿಚಾರ, ಸಂಸ್ಕೃತಿ, ನಡೆ, ನುಡಿ ಅವಲಂಬಿಸಿರುತ್ತದೆ. ಜೀವನ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಗುರುಗಳ ಪಾತ್ರ ಮುಖ್ಯ ಎಂದು ತೊಳಲಿಯ ಕುಮಾರಶಾಸ್ತ್ರೀ ಹಿರೇಮಠ ತಿಳಿಸಿದರು.
ಇದನ್ನೂ ಓದಿ: ಸತ್ಯಕ್ಕೆ ಶಾಶ್ವತ ಜಯ ಖಚಿತ
ಗ್ರಾಮದ ಶ್ರೀಸಿದ್ಧೇಶ್ವರ ಮಠದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಹಮ್ಮಿಕೊಂಡಿದ್ದ ಶಿವಾನುಭವ ಸಂತ್ಸಂಗ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಜೀವನದಲ್ಲಿ ತಪ್ಪುಗಳು ಮಾಡುವುದು ಸಹಜ. ಅವುಗಳನ್ನು ಸರಿಪಡಿಸಿಕೊಂಡು ಜೀವನದಲ್ಲಿ ಸಾಗಬೇಕು. ಗುರುವಿನ ಮಾರ್ಗದರ್ಶನದೊಂದಿಗೆ ಪ್ರಾಮಾಣಿಕತೆ, ಸಂಸ್ಕಾರ, ಶಿಸ್ತು ಬೆಳೆಸಿಕೊಂಡಾಗ ಜೀವನದಲ್ಲಿ ಏಳಿಗೆಗೆ ಸಹಕಾರಿಯಾಗಲಿದೆ. ಬದುಕಿನಲ್ಲಿ ಎದುರಾಗುವ ಕಷ್ಟ, ನಷ್ಟ, ದುಃಖ, ದುಮ್ಮಾನಗಳನ್ನು ಸಮರ್ಥವಾಗಿ ಎದುರಿಸಿ ಜೀವನ ನಡೆಸಬೇಕು ಎಂದರು.
ಮರುಳಾರಾಧ್ಯ ಶಿವಾಚಾರ್ಯ ಮಾತನಾಡಿ, ಮಠ, ಮಂದಿರಗಳಲ್ಲಿ ನಡೆಯುವ ಪುರಾಣ, ಪ್ರವಚನ, ಸತ್ಸಂಗ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಸರ್ವರು ಒಂದೇ ಎಂಬ ಭಾವನೆ ಇರಲಿ.
ಆಗ ಜೀವನ ಅರ್ಥ ದೊರೆಯಲಿದೆ.ಕೆಟ್ಟ ವಿಚಾರಗಳು ಬದುಕು, ಆರೋಗ್ಯ, ಮಾನಸಿಕ ನೆಮ್ಮದಿ ಹಾಳು ಮಾಡುತ್ತವೆ. ಜೀವನದಲ್ಲಿ ದುಡ್ಡಿನಿಂದ ಆಸ್ತಿ, ಪಾಸ್ತಿ, ಮನೆ, ಜಮೀನನ್ನು ಖರೀದಿಸಬಹುದು. ಆದರೆ ಆರೋಗ್ಯವನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದರು.
ಪ್ರಮುಖರಾದ ಡಾ.ಸಿದ್ಧಲಿಂಗಸ್ವಾಮಿ ಇನಾಮದಾರ, ರವಿಶಂಕರಸ್ವಾಮಿ ಇನಾಮದಾರ, ಎ.ಟಿ.ಕಲ್ಮಠ, ದೇವಪ್ಪ ಕಟ್ಟಿಮನಿ, ಚಿಕ್ಕವೀರಜ್ಜ, ಭೀಮರಡ್ಡಿ ಗದ್ದಿಕೇರಿ, ಅಶೋಕ ಬಂಡಿ, ಅನ್ವರ ಗಡಾದ, ಇಸ್ಮಾಯಿಲ್, ಅರವಿಂದಪ್ಪ ಬಿರಾದಾರ, ಚೌಡಪ್ಪ ಜಂತ್ಲಿ, ರಮೇಶ ಭಾವಿಹಳ್ಳಿ,
ನಜರುದ್ದೀನ, ವೀರಭದ್ರಯ್ಯ ಶಿರೂರಮಠ, ಮಂಜುನಾಥ ಹಿರೇಮಠ, ಉಮೇಶಗೌಡ, ಸಾಗರ, ಬಸವರಾಜ ತಳಕಲ್, ಗವಿಸಿದ್ದರಡ್ಡಿ, ಮಂಜುನಾಥಗೌಡ ಪಾಟೀಲ, ಹನುಮಂತಪ್ಪ ಕರಡಿ, ಶರಣಪ್ಪ, ಜಗನ್ನಾಥರಡ್ಡಿ ಇದ್ದರು. ವಾದಿರಾಜ ಪಾಟೀಲ, ಹುಲಗಪ್ಪ, ಬಸವರಾಜ ಕಿನ್ನಾಳ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.