ಸಕಾರಾತ್ಮಾಕ ಚಿಂತನೆಯಿಂದ ಬದುಕು ಬದಲಾವಣೆ

3sdp3- muddukrishna
Published on

ಸಿದ್ದಾಪುರ: ಪಟ್ಟಣದ ಹೊಸೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಓಂ ಶಾಂತಿ ಭವನದಲ್ಲಿ ರಕ್ಷಾ ಬಂಧನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳಿಂದ ಛದ್ಮವೇಷ ಪ್ರದರ್ಶನ ಶನಿವಾರ ಜರುಗಿತು.

ದಾವಣಗೆರೆಯ ರಾಜಯೋಗಿನಿ ಬಿ.ಕೆ. ಲೀಲಾಜಿ ಕಾರ್ಯಕ್ರಮ ಉದ್ಘಾಟಿಸಿ ರಕ್ಷಬಂಧನದ ಮಹತ್ವ ವಿವರಿಸಿ ಸಹೋದರತ್ವ ಪ್ರತಿಜ್ಞೆಮಾಡಿಸಿ ಎಲ್ಲರಿಗೂ ಶ್ರೀರಕ್ಷೆ ಕಟ್ಟಿದರು. ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಹಾಗೂ ತಾವು ಬದಲಾದರೆ ತಮ್ಮ ಮಕ್ಕಳ ಪರಿವರ್ತನೆ ಸಾಧ್ಯ ಎಂದು ಹೇಳಿದರು.

ರಾಜಯೋಗಿನಿ ಬಿ.ಕೆ. ವೀಣಾ ಜಿ. ಮಾತನಾಡಿ, ಸಕಾರಾತ್ಮಾಕ ಚಿಂತನೆಯಿಂದ ಬದುಕಿನ ದಿಕ್ಕೇ ಬದಲಾಗುತ್ತದೆ. ಸ್ವಪರಿವರ್ತನೆಯಿಂದ ವಿಶ್ವಪರಿವರ್ತನೆ ಸಾಧ್ಯ. ವಿಶೇಷತೆಯ ಚಷ್ಮಾ ಧರಿಸಿದರೆ ಪ್ರತಿಯೊಬ್ಬರಲ್ಲಿರುವ ವಿಶೇಷತೆ ಕಾಣುತ್ತದೆ ಎಂದು ಹೇಳಿದರು.

ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಬಾಲ ಶ್ರೀಕೃಷ್ಣ, ರಾಧೆಯರ ಛದ್ಮವೇಷದ್ಲಲಿ 62 ಮಕ್ಕಳು ಪಾಲ್ಗೊಂಡಿದ್ದರು. ಬಿ.ಕೆ. ದೇವಕಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net