ಶಿಕ್ಷಣದಿಂದ ಮಾತ್ರ ಬದುಕು ಬದಲು

Life can be changed only through education.
ತೇರದಾಳ ಪಟ್ಟಣದಲ್ಲಿ ಬಣಜಿಗ ಸಮಾಜದ ತೇರದಾಳ ತಾಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮವನ್ನು ತೂಕದ ತಕ್ಕಡಿಗೆ ಸಕ್ಕರೆ ಹಾಕುವುದರ ಮೂಲಕ ಉದ್ಘಾಟಿಸಲಾಯಿತು. ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ರೂಢಗಿ, ಶ್ರೀಶೈಲ ಮೋದಿ, ಅಪ್ಪು ಮಂಗಸೂಳಿ ಇದ್ದರು.
Published on

ತೇರದಾಳ: ಶಿಕ್ಷಣವು ಮಾನಸಿಕ ಸದೃಢತೆ ಹೆಚ್ಚಿಸುವುದರ ಮೂಲಕ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಬ್ರಿಟನ್ ಪ್ರಧಾನಿ ಹುದ್ದೆಗೆ ಭಾರತೀಯನೋರ್ವ ಏರಿದ್ದು ಜ್ಞಾನದ ಬಲದಿಂದಲೇ ಎಂಬುದನ್ನು ಮರೆಯಬಾರದು ಎಂದು ಶೇಗುಣಸಿಯ ವಿರಕ್ತಮಠದ ಡಾ.ಮಹಾಂತಪ್ರಭು ಶ್ರೀ ಹೇಳಿದರು.

ಸ್ಥಳೀಯ ಸಿದ್ಧೇಶ್ವರ ಗಲ್ಲಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಬಣಜಿಗ ಸಮಾಜದ ತೇರದಾಳ ತಾಲೂಕು ಘಟಕದಿಂದ ಇತ್ತೀಚೆಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಬದುಕನ್ನು ಬದಲಾಯಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಅಜ್ಞಾನವನ್ನು ಹೊಡೆದೊಡಿಸಿ, ಜ್ಞಾನದ ಬೆಳಕನ್ನು ನೀಡುತ್ತದೆ. ಜ್ಞಾನಿಗೆ ವಿಶ್ವದಲ್ಲೆಡೆ ಮನ್ನಣೆ ಸಿಗುತ್ತದೆ ಎಂದರು.

ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ರೂಢಗಿ ಮಾತನಾಡಿ, ನಮ್ಮ ಸಮಾಜವು ಶಾಂತಿಯುತ ಮನೋಭಾವದ ಮೂಲಕ ವ್ಯಾಪಾರ ವಹಿವಾಟು ಮಾಡುತ್ತಾ ಬಂದಿದ್ದೇವೆ. ಅದಕ್ಕೆ ರಾಜಕೀಯ ಪ್ರಭಾವ ಬೀರಬಾರದು. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ನಮ್ಮತನವನ್ನು ಉಳಿಸುವ ಮಾಧ್ಯಮಗಳಾಗಿದ್ದು, ಅವುಗಳನ್ನು ಮುಂದಿನ ಪಿಳಿಗೆಗೆ ಹಸ್ತಾಂತರಿಬೇಕೆಂದು ಕಿವಿಮಾತು ಹೇಳಿದರು.

ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ, ವೈದ್ಯಕೀಯ ಶಿಕ್ಷಣದಲ್ಲಿ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮಾಜ ಅಧ್ಯಕ್ಷ ಶ್ರೀಶೈಲ ಮೋದಿ, ಬನಹಟ್ಟಿ ಸಮಾಜ ಅಧ್ಯಕ್ಷ ಗುರುಸಿದ್ದಪ್ಪ ಚನ್ನಾಳ, ಹಿರಿಯರಾದ ಬಾಲಚಂದ್ರ ಯಾದವಾಡ, ಅಪ್ಪು ಮಂಗಸೂಳಿ, ರಮೇಶ ಅವರಾದಿ, ಗಿರೀಶ ಯಾದವಾಡ, ಶ್ರೀನಾಥ ಸೊಟ್ಟಿ, ಡಾ.ಮೋಹನ ನಿಡೋಣಿ, ಸೋಮಶೇಖರ ಕೊಟ್ರಶೆಟ್ಟಿ, ಡಾ.ಸಿದ್ದು ಹಂಜಿ, ಶ್ರೀಧರ ಜಾಬಶೆಟ್ಟಿ, ಬಸವರಾಜ ತೆಗ್ಗಿ, ಶಿವಾನಂದ ಮುತ್ತೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net