ಬದುಕನ್ನು ಕಟ್ಟಿಕೊಡುವ ಮಾರ್ಗದರ್ಶನ ಕೇಂದ್ರ ಕಾಲೇಜು

12sgr8
ಸಾಗರದ ಇಂದಿರಾಗಾಂಧಿ ಕಾಲೇಜಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಯಾನಂದ್ ಟಿ.ನಾಯ್ಕ, ಡಾ. ರಾಜೇಶ್ವರಿ, ಮಧುಮಾಲತಿ, ಬಿ.ಎಚ್.ಲಿಂಗರಾಜ್, ಪ್ರೊ. ಕೆ.ಎನ್.ಮಹಾಬಲೇಶ್ವರ್, ಎಚ್.ಸ್ನೇಹಾ ಇತರರಿದ್ದರು.
Published on

ಸಾಗರ: ಜೀವನದಲ್ಲಿ ಗುರು ಮತ್ತು ಗುರಿ ಇರಬೇಕು. ಕಾಲೇಜು ಕೇವಲ ಶಿಕ್ಷಣವನ್ನು ಕಲಿಸುವುದಿಲ್ಲ. ಬದುಕನ್ನು ಕಟ್ಟಿಕೊಳ್ಳಲು ಮಾರ್ಗದರ್ಶನವನ್ನು ತೋರುವ ಕೇಂದ್ರ ಎಂದು ಡಿವೈಎಸ್‌ಪಿ ದಯಾನಂದ್ ಟಿ.ನಾಯ್ಕ ಹೇಳಿದರು.

ನಗರದ ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಚಟುವಟಿಕೆಗಳ ಸಮಾರೋಪ, ರ‌್ಯಾಂಕ್ ವಿಜೇತ ಮತ್ತು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬದುಕಿಗೆ ಅಂಕ ಮಾನದಂಡವಾಗುವುದಿಲ್ಲ. ಅಂಕದ ಜತೆಗೆ ನಾವು ಭವಿಷ್ಯದಲ್ಲಿ ಆಯ್ಕೆ ಮಾಡಿಕೊಳ್ಳುವ ದಾರಿಯ ಬಗ್ಗೆಯೂ ಗಮನಹರಿಸಬೇಕು. ಕಾಲೇಜು ಜೀವನ ಅತ್ಯಂತ ಸುಂದರವಾಗಿರುವ ಜತೆಗೆ ಅಷ್ಟೇ ಸವಾಲಿನದ್ದಾಗಿರುತ್ತದೆ. ಸಾಗರದ ಇಂದಿರಾಗಾಂಧಿ ಮಹಿಳಾ ಕಾಲೇಜಿಗೆ ರಾಜ್ಯಮಟ್ಟದಲ್ಲಿ ಉತ್ತಮ ಹೆಸರಿದೆ. ನಿಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಕಾಲೇಜಿನ ಕೀರ್ತಿ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕು ಎಂದರು.
ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡು ಪಾಲಕರು ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಿರುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ನೀವು ಉತ್ತಮ ಫಲಿತಾಂಶ ಪಡೆದು ಉನ್ನತ ಸ್ಥಾನಕ್ಕೆ ಹೋಗಿ ಸತ್ಪ್ರಜೆಗಳಾಗಿ ರೂಪುಗೊಂಡಾಗ ಇದಕ್ಕೆಲ್ಲ ಪ್ರತಿಫಲ ಸಿಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯೆ ಡಾ. ರಾಜೇಶ್ವರಿ, ನಗರಸಭೆ ಸದಸ್ಯ ಬಿ.ಎಚ್.ಲಿಂಗರಾಜ್, ಮಧುಮಾಲತಿ, ಪ್ರಮುಖರಾದ ಡಾ. ಸಿ.ಕೆ.ಮೂಕಪ್ಪ ನಾಯ್ಕ, ಎಚ್.ಸ್ನೇಹಾ, ಪ್ರೊ. ಕೆ.ಎನ್.ಮಹಾಬಲೇಶ್ವರ, ಅನ್ವಿತಾ, ಸಾಹಿತ್ಯಾ, ಡಾ. ದೀಪಾ, ಡಾ. ಪ್ರತಿಭಾ,ಡಾ. ಸೋಮಶೇಖರ್, ಪ್ರೊ. ಎಂ.ಜಿ.ರಂಗಣ್ಣನವರ್, ಎಂ.ಎಲ್.ದೀಕ್ಷಾ, ಎಚ್.ಸಿ. ಸಿಂಚನಾ, ಡಾ. ಶಿವಾನಂದ ಎಸ್. ಭಟ್, ಪ್ರಿಯಾ, ಅಕ್ಷತಾ, ಸ್ಪಂದನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net