ಸಮಸ್ಯೆಗೆ ಪರಿಹಾರ ಸಿಕ್ಕಾಗ ಬದುಕು ನೆಮ್ಮದಿ

ಸ್ಥಳೀಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಾಗ ಮಾತ್ರ ಜನ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯ, ಇದಕ್ಕಾಗಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.
suresh kumar
ರಾಜಾಜಿನಗರ ಕ್ಷೇತ್ರದ ದಯಾನಂದನಗರ ವಾರ್ಡ್‌ನಲ್ಲಿ ಭಾನುವಾರ ಶಾಸಕ ಸುರೇಶ್‌ಕುಮಾರ್ ಜನರ ಅಹವಾಲು ಆಲಿಸಿದರು. folder
Published on: 

* 150 ದಿನ ಪೂರೈಸಿದ ‘ದಿನಕ್ಕೊಂದು ವಾರ್ಡ್ ನಡಿಗೆ’

ಬೆಂಗಳೂರು: ಸ್ಥಳೀಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಾಗ ಮಾತ್ರ ಜನ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯ, ಇದಕ್ಕಾಗಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಯಾನಂದನಗರ ವಾರ್ಡ್‌ನಲ್ಲಿ ‘ದಿನಕ್ಕೊಂದು ವಾರ್ಡ್ ನಡಿಗೆ’ಯ 150ನೇ ಕಾರ್ಯಕ್ರಮದಡಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಡ್ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು. ನಾಗರಿಕರ ಸಮಸ್ಯೆಗಳು ನಿವಾರಣೆಯಾಗಬೇಕು. ತಕ್ಷಣ ಪರಿಹಾರ ಸಿಗಬೇಕು ಎಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಜನರೊಂದಿಗೆ ಜನಸೇವಕ 76 ವಾರ ಮತ್ತು ದಿನಕ್ಕೊಂದು ವಾರ್ಡ್ ನಡಿಗೆ 150 ದಿನ ಪೂರೈಸಿದೆ. ಇದರಡಿ 20 ಸಾವಿರ ಜನರ ಭೇಟಿ ಮಾಡಿದ್ದು, ಐದು ಸಾವಿರ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.

‘ದಿನಕ್ಕೊಂದು ವಾರ್ಡ್ ನಡಿಗೆ’ ದಯಾನಂದನಗರ ವಾರ್ಡ್‌ನಲ್ಲಿ ಪ್ರಾರಂಭವಾಗಿ ಪ್ರಕಾಶನಗರ, ಶ್ರೀರಾಮ ಮಂದಿರ, ರಾಜಾಜಿನಗರ, ಶಿವನಗರ, ಬಸವೇಶ್ವರನಗರದಲ್ಲಿ ಸಾಗಿ ಕಾಮಾಕ್ಷಿಪಾಳ್ಯ ವಾರ್ಡ್‌ನಲ್ಲಿ ಅಂತ್ಯಗೊಂಡಿತು. ಕಾರ್ಯಕ್ರಮದಲ್ಲಿ ವಾಜಿ ಉಪ ಮಹಾಪೌರ ರಂಗಣ್ಣ, ಮಾಜಿ ಕಾರ್ಪೋರೇಟರ್‌ಗಳಾದ ಎಂ.ಮುನಿರಾಜು, ಶಕೀಲ ಮುನಿರಾಜು, ಬಿಜೆಪಿ ಮಂಡಲ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.