ಶ್ರೀರಂಗಪಟ್ಟಣದಲ್ಲಿ ಎಂದಿನಂತೆ ಜನಜೀವನ

SRP_22-02jpj
Published on

ಶ್ರೀರಂಗಪಟ್ಟಣ: ಎಂಇಎಸ್ ದೌರ್ಜನ್ಯ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ರಾಜ್ಯಾದ್ಯಂತ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ತಾಲೂಕಿನ ಬಹುತೇಕ ಎಲ್ಲ ಹೋಬಳಿ ಸೇರಿದಂತೆ ತಾಲೂಕು ಕೇಂದ್ರದಲ್ಲೂ ಅಂಗಡಿ ಮುಂಗಟ್ಟು ಎಂದಿನಂತೆ ವ್ಯಾಪಾರ ವಾಹಿವಾಟು ನಡೆಯಿತು. ಬಸ್ ಸಂಚಾರದಲ್ಲಿ ಕೊಂಚ ವ್ಯತ್ಯಯ ಕಂಡುಬಂದಿದ್ದು, ಸಮಸ್ಯೆ ಉಂಟಾಗುವಂತಹ ಯಾವ ಪರಿಣಾಮ ಎದುರಾಗಲಿಲ್ಲ. ಇನ್ನು ಶ್ರೀರಂಗಪಟ್ಟಣದಲ್ಲಿ ಪ್ರತಿ ವಾರದಂತೆ ಶನಿವಾರವೂ ಸಂತೆ ನಡೆದಿದ್ದು, ಬೀದಿಬದಿ ವ್ಯಾಪಾರ, ಹೋಟೆಲ್ ಉದ್ಯಮ, ಆಟೋಗಳ ಸಂಚಾರ ಹಾಗೂ ನಿತ್ಯ ಜನಜಗುಂಳಿ ಸೇರಿದಂತೆ ದೇಶ-ವಿದೇಶಗಳ ಪ್ರವಾಸಿಗರು ಎಂದಿನಂತೆ ಆಗಮಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಆದರೂ ಕೆಲ ಸಂಘಟನೆಗಳು ಹಾಗೂ ಹೋರಾಟಗಾರರು ಪ್ರತಿಭಟಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿಯ ಕುವೆಂಪು ವೃತ್ತ ಸೇರಿದಂತೆ ಪ್ರಮುಖ ವೃತ್ತಗಳು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net