

ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವದ ಮೂರನೇ ದಿನವಾದ ಭಾನುವಾರ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳಿಂದ ಪ್ರತಿಷ್ಠಾ ಕಾರ್ಯಗಳು ನೆರವೇರಿದವು.
ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳನ್ನು ಮಾತೆಯರು ಪೂರ್ಣಕುಂಭ ಹಾಗೂ ಭಗವದ್ಗೀತಾ ಪಠಣದ ಮೂಲಕ ಬರ ಮಾಡಿಕೊಂಡರು. ಬ್ರಹ್ಮಣಸ್ಪತಿ ಸೂಕ್ತ ಹವನದ ಪೂರ್ಣಾಹುತಿ ನೆರವೇರಿಸಿದ ಶ್ರೀಗಳು, ನಂತರ ಘಂಟೆ ಗಣಪತಿಯ ಮೂರ್ತಿಯ ಪ್ರಾಣ ಪ್ರತಿಷ್ಠೆ, ಶಿಖರ ಪ್ರತಿಷ್ಠೆ ಹಾಗೂ ಧ್ವಜ ಪ್ರತಿಷ್ಠೆ ನೆರವೇರಿಸಿದರು. ವಿದ್ವಾನ್ ನಾರಾಯಣ ದೇಸಾಯಿ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. 5 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದರು.