

ರಾಣೆಬೆನ್ನೂರ: ವ್ಯಕ್ತಿ ಜೀವಂತವಿರುವಾಗಲೇ ಆತ ಮೃತಪಟ್ಟಿದ್ದಾನೆ ಎಂದು ಖೊಟ್ಟಿ ವಂಶವೃಕ್ಷ ಸೃಷ್ಟಿಸಿದ ಆರೋಪದಡಿ ಇಲ್ಲಿಯ ತಹಸೀಲ್ದಾರ್ ಕಚೇರಿಯ ಗ್ರಾಮ ಲೆಕ್ಕಾಽಕಾರಿ ಸೇರಿ ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಸಾವಿತ್ರಾ ಮಂಜುನಾಥ ಕುಲಕರ್ಣಿ, ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ಮಂಜಯ್ಯ ವೀರಯ್ಯ ಹಿರೇಮಠ ಹಾಗೂ ನಗರದ ತಹಸೀಲ್ದಾರ್ ಕಚೇರಿಯ ಗ್ರಾಮ ಲೆಕ್ಕಾಽಕಾರಿ ವಾಗೀಶ ಮಳೇಮಠ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರ ವಿರುದ್ಧ ಕೋಟೆ ಓಣಿಯ ಚಂದ್ರಶೇಖರಯ್ಯ ಗುರುಲಿಂಗಯ್ಯ ಕುಲಕರ್ಣಿ (೭೨) ದೂರು ದಾಖಲಿಸಿದ್ದಾರೆ.
ಘಟನೆ ಹಿನ್ನೆಲೆ...
ಸಾವಿತ್ರಾ ಕುಲಕರ್ಣಿ ತನ್ನ ಪತಿಯ ವಿರುದ್ಧ ೨೦೦೭-೦೮ನೇ ಸಾಲಿನಲ್ಲಿ ಜೀವನಾಂಶ ಕೇಳಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಳು. ಅದಕ್ಕಾಗಿ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸುವಾಗ ೨೦೧೦ ಸೆಪ್ಟಂಬರ್ ೧೭ರಂದು ಮೂವರು ಆರೋಪಿತರು ಸೇರಿ ಚಂದ್ರಶೇಖರಯ್ಯ ಜೀವಂತವಿದ್ದರೂ ಪೋತಿ ಆಗಿದ್ದಾನೆ ಎಂದು ಖೊಟ್ಟಿ ವಂಶವೃಕ್ಷ ತಯಾರಿಸಿಕೊಂಡಿದ್ದರು. ಅದನ್ನು ನೈಜ ಪತ್ರ ಎಂದು ನ್ಯಾಯಾಲಯಕ್ಕೆ ಸಲ್ಲಿಸಿ ನನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಮೋಸದಿಂದ ಪಡೆಯಲು ಯತ್ನಿಸಿದ್ದಾರೆ ಎಂದು ಚಂದ್ರಶೇಖಯ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ತನಿಖೆ ಕೈಗೊಂಡಿದ್ದಾರೆ.