ಲಿಡಕರ್​ ಅಂಗಡಿ ತೆರವು ಅಮಾನವೀಯ ಕ್ರಮ

Lidkar's shop eviction is an inhumane act
ತಾಳಿಕೋಟಿ ಪಟ್ಟಣದಲ್ಲಿ ಲಿಡಕರ್​ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ಖಂಡಿಸಿ ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್​ ಕಾರ್ಯಕರ್ತರು ವಿಜಯಪುರದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು. ಸುನೀಲ ಜೈನಾಪೂರ, ರಮೇಶ ಹೊನಮೊರೆ, ಲಕ್ಷ$್ಮಣ ಕುಂದರಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ತಾಳಿಕೋಟಿ ಬಸ್​ ನಿಲ್ದಾಣದ ಹೊರಭಾಗದಲ್ಲಿ ರಸ್ತೆ ಬದಿ ಪಾದರೆ ದುರಸ್ತಿಗಾರರ ಲಿಡಕರ್​ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ಖಂಡಿಸಿ ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್​ ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪರಿಷತ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ ಜೈನಾಪೂರ ಮಾತನಾಡಿ, ಲಿಡಕರ್​ ಅಂಗಡಿಗಳನ್ನು ತೆರವುಗೊಳಿಸದಂತೆ ಉಚ್ಚ ನ್ಯಾಯಾಲಯದ ತಡೆಯಾೆ ಆದೇಶವಿದ್ದರೂ ಅಂಗಡಿಗಳನ್ನು ಕೆಡವಿ ನ್ಯಾಯಾಲಯದ ಆದೇಶವನ್ನು ಪುರಸಭೆ ಅಧಿಕಾರಿಗಳು ಉಲ್ಲಂನೆ ಮಾಡಿದ್ದಾರೆ. ಇದು ಕಾನೂನಿನ ನಿಂದನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆಯ ಬದಿಯ ಪಾದರೆ ದುರಸ್ತಿಗಾರರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಸರ್ಕಾರದ ಹಲವು ಯೋಜನೆಗಳಡಿ ಬದಲಿ ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು. ಆದರೆ, ಆಡಳಿತಶಾಹಿಗೆ ಈ ಕಾಳಜಿ ಇದ್ದಂತಿಲ್ಲ.

ಪೂರ್ವಭಾವಿಯಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡದೆ, ಅವಮಾನಿತ ಬಡವರ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದಂತೆ ಮಾಡಿರುವ ಪುರಸಭೆಯ ಕ್ರಮವು ಅೇಪಾರ್ಹವು ಹಾಗೂ ಅಮಾನವೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಮೇಶ ಹೊನಮೊರೆ ಮಾತನಾಡಿದರು. ಬಸವರಾಜ ಕಾಂಬಳೆ, ಜಗದೀಶ ಮನಗೂಳಿ, ಲಕ್ಷ$್ಮಣ ಕುಂದರಗಿ, ಶ್ರೀಕಾಂತ ಪೂಜಾರಿ, ಸಂತೋಷ ಹಂಜಗಿ, ಅನೀಲಕುಮಾರ ಮುಳಸಾವಳಗಿ, ಸಿದ್ದಪ್ಪ ಚವಾಣ, ಪ್ರಶಾಂತ ಕಿರಣಗಿ, ರಾಚಪ್ಪ ದೊಡಮನಿ, ಮಂಜುನಾಥ ಹೊನಕೇರಿ, ರೋಹಿತ ಭಾವಿಕಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net