ಹೊರರಾಜ್ಯದವರಿಗೆ ಪರವಾನಗಿ ಕೊಡಬೇಡಿ

15-hrbd-1-Web
ಹೊರರಾಜ್ಯಗಳಿಂದ ಬರುವ ವ್ಯಾಪಾರಸ್ಥರಿಗೆ ಹಿರೇಬಾಗೇವಾಡಿಯಲ್ಲಿ ಉದ್ಯೋಗ ಕೈಗೊಳ್ಳಲು ಪರವಾನಗಿ ನೀಡಬಾರದೆಂದು ಆಗ್ರಹಿಸಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗ್ರಾಪಂಗೆ ಮನವಿ ಸಲ್ಲಿಸಲಾಯಿತು. ಬಿ.ಬಿ. ಬಾಗೇವಾಡಿ, ಶಿವರಾಯಗೌಡ ಪಾಟೀಲ, ಚಂದ್ರಕಾಂತ ಇದ್ದರು.
Published on

ಹಿರೇಬಾಗೇವಾಡಿ: ಹೊರರಾಜ್ಯಗಳಿಂದ ಬರುವ ವ್ಯಾಪಾರಸ್ಥರಿಗೆ ಗ್ರಾಮದಲ್ಲಿ ಉದ್ಯೋಗ ಮಾಡಲು ಪರವಾನಗಿ ನೀಡಬಾರದು ಎಂದು ಒತ್ತಾಯಿಸಿ ಇಲ್ಲಿಯ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗ್ರಾಪಂಗೆ ಮನವಿ ಸಲ್ಲಿಸಲಾಯಿತು.

ಕರೊನಾ ಹಾಗೂ ಲಾಕ್‌ಡೌನ್‌ದಿಂದಾಗಿ ಇಲ್ಲಿಯ ವರ್ತಕರೆಲ್ಲ ನಷ್ಟ ಅನುಭವಿಸಿ, ಕುಟುಂಬ ನಿರ್ವಹಣೆಗೆ ಸಮಸ್ಯೆ ಅನುಭವಿಸಿದ್ದಾರೆ. ಇದೀಗ ಹೊರರಾಜ್ಯದಿಂದ ವ್ಯಾಪಾರಸ್ಥರು ಇಲ್ಲಿಗೆ ಬರುತ್ತಿರುವುದರಿಂದ ಸ್ಥಳೀಯರಿಗೆ ಹೆಚ್ಚಿನ ನಷ್ಟವಾಗುತ್ತಿದೆ. ಹೀಗಾಗಿ ಹಿರೇಬಾಗೇವಾಡಿಯಲ್ಲಿ ಉದ್ಯೋಗ ಮಾಡಲು ಅವರಿಗೆ ಪರವಾನಗಿ ನೀಡಬಾರದು ಎಂದು ಗ್ರಾಪಂ ಕಾರ್ಯದರ್ಶಿ ಶಂಕರ ತಳವಾರ ಅವರಿಗೆ ಮನವಿ ಸಲ್ಲಿಸಿದರು.

ಬಿ.ಬಿ.ಬಾಗೇವಾಡಿ, ಲಿಂಗರಾಜ ಪಾಶ್ಚಾಪುರ, ಚಂದ್ರಕಾಂತ ಅಂಗಡಿ, ಶಿವರಾಯಗೌಡಾ ಪಾಟೀಲ, ರಾಜು ಭಾವಿಮನಿ, ಬಸವರಾಜ ಗುಗ್ಗರಿ, ಚನ್ನಬಸವ ಗಾಣಿಗೇರ, ಶಿವಾನಂದ ರೊಟ್ಟಿ, ಮಹಾಂತೇಶ ಈಳಿಗೇರ, ಇಮ್ರಾನ್ ಸಯ್ಯದ್, ರಾಜಶೇಖರ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net