

ಹುಬ್ಬಳ್ಳಿ : ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಸೆೆ. 16ರಂದು ಸಂಜೆ 5 ಗಂಟೆಗೆ ಸಂಸ್ಥೆಯ ಸಭಾಭವನದಲ್ಲಿ ಟ್ರೇಡ್ ಲೈಸೆನ್ಸ್ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ವ್ಯಾಪಾರ ಪರವಾನಗಿಗಳ (ಟ್ರೇಡ್ ಲೈಸನ್ಸ್) ವಿತರಣೆ ಮತ್ತು ವ್ಯಾಪಾರ ಪರವಾನಿಗೆಗಳ ನವೀಕರಣ ಮಾಡಲಾಗುವುದು. ವ್ಯಾಪಾರಸ್ಥರು ಹೊಸದಾಗಿ ಟ್ರೇಡ್ ಲೈಸನ್ಸ್ ಪಡೆದುಕೊಳ್ಳಲು ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ವ್ಯಾಪಾರ ಪರವಾನಿಗೆಗಳ ಹೊಸ ಅರ್ಜಿಗೆ ಹಾಗೂ ವ್ಯಾಪಾರ ಪರವಾನಿಗೆಗಳ ನವೀಕರಣಕ್ಕೆ ತಗಲುವ ವೆಚ್ಚವನ್ನು ಪಾವತಿಸಬೇಕು.
ಈ ಕಾರ್ಯಕ್ರಮವು ವ್ಯಾಪಾರ ಪರವಾನಿಗೆಗಳನ್ನು ಪಡೆಯಲು ಮತ್ತು ನವೀಕರಿಸಲು ಅನುಕೂಲಕರ ಮತ್ತು ಪರಿಣಾಮಕಾರಿಯಾಗಿದೆ. ಇದರಿಂದ ಸ್ಥಳೀಯ ನಿಯಮಗಳ ಅನುಸರಣೆ ಮತ್ತು ಈ ಪ್ರದೇಶದಲ್ಲಿನ ವ್ಯವಹಾರಗಳ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.
ಈ ಕಾರ್ಯಕ್ರಮದಲ್ಲಿ ಅರ್ಜಿದಾರರಿಗೆ ಸಹಾಯ ಮಾಡಲು ಅಧಿಕಾರಿಗಳು ಇರುವರು. ಟ್ರೇಡ್ ಲೈಸನ್ಸಿಗೆ ವ್ಯಾಪಾರ ಪರವಾನಗಿ ಪ್ರಕ್ರಿಯೆಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.