ಎಲ್‌ಐಸಿ ವಿಮೆಯಿಂದ ಬದುಕಿಗೆ ಭದ್ರತೆ

23BLH4
ಬೈಲಹೊಂಗಲ ಎಲ್‌ಐಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜೀವನ ದೀಪ ಪ್ರತಿನಿಧಿಗಳ ವಾರ್ಷಿಕ ಮಹಾಸಭೆಯಲ್ಲಿ ಎಲ್‌ಐಸಿ ಬೆಳಗಾವಿ ಮಾರುಕಟ್ಟೆ ಪ್ರಬಂಧಕ ಮನೋಜ ಮ್ಯಾಥ್ಯೂ ಮಾತನಾಡಿದರು. ಸಚಿನ ಕುಲಕರ್ಣಿ, ಸಂಜಯ ಮಹಾಲೆ ಇದ್ದರು.
Published on

ಬೈಲಹೊಂಗಲ: ಎಲ್‌ಐಸಿ ವಿಮೆ ಸೌಲಭ್ಯ ಬದುಕಿಗೆ ರಕ್ಷಣೆ ಒದಗಿಸುತ್ತದೆ. ಪ್ರತಿಯೊಬ್ಬರೂ ವಿಮೆ ಪಡೆದು ಭದ್ರತೆ ಒದಗಿಸಿಕೊಳ್ಳಬೇಕು ಎಂದು
ಎಲ್‌ಐಸಿ ಬೆಳಗಾವಿ ಮಾರುಕಟ್ಟೆ ಪ್ರಬಂಧಕ ಮನೋಜ ಮ್ಯಾಥ್ಯೂ ಹೇಳಿದರು. ಪಟ್ಟಣದ ಹೊಸೂರ ರಸ್ತೆಯ ಭಾರತೀಯ ಜೀವ ವಿಮಾ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜೀವನ ದೀಪ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಶಾಖಾ ವ್ಯವಸ್ಥಾಪಕ ಸಚಿನ ಕುಲಕರ್ಣಿ, ಅಭಿವೃದ್ಧಿ ಅಧಿಕಾರಿ ಸಂಜಯ ಮಹಾಲೆ ಮಾತನಾಡಿದರು. ಹೆಚ್ಚಿನ ಪಾಲಿಸಿ ನೀಡಿದ ಪ್ರತಿನಿಧಿಗಳನ್ನು ಸತ್ಕರಿಸಲಾಯಿತು. ಪ್ರತಿನಿಧಿಗಳಾದ ಬಿ.ಎಸ್.ಕಿವಡಸನ್ನವರ, ಶಂಕರ ಮಾಡಲಗಿ, ಸಿದ್ದಣ್ಣ ಗದಗ, ವಿರೂಪಾಕ್ಷಪ್ಪ ಅಂಗಡಿ, ಎಂ.ಆರ್.ಮೆಳವಂಕಿ, ಉಮೇಶ ಟೋನ್ನಿ, ಪಿ.ಆರ್.ಗಾಣಗಿ, ನಾಗರತ್ನ ಅಂಬರಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net