ಗ್ರಂಥಾಲಯ ಸಾವಿರ ಸ್ನೇಹಿತರಿಗೆ ಸಮ

5Huk3
Published on

ರಾಯಬಾಗ: ಒಂದು ಗ್ರಂಥಾಲಯ ಸಾವಿರ ಗೆಳೆಯರಿಗೆ ಸಮ. ಗ್ರಂಥಾಲಯದ ಗೆಳೆತನದಿಂದ ಉತ್ತಮ ಆಚಾರ, ವಿಚಾರ, ಸುದ್ದಿ ತಿಳಿಯುತ್ತದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ತಾಲೂಕಿನ ಕೆಂಪಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ

ಹಮ್ಮಿಕೊಂಡಿದ್ದ ಶಾಂತಿನಿಕೇತನ ಗ್ರಂಥಾಲಯ ಉದ್ಘಾಟನೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.

ಗ್ರಂಥಗಳನ್ನು ಓದುವುದರಿಂದ ಇತಿಹಾಸ ಅರ್ಥೈಯಿಸಿಕೊಳ್ಳುವುದರ ಜತೆಗೆ ಬುದ್ದಿವಂತಿಕೆ ಹೆಚ್ಚುತ್ತದೆ. ನನ್ನ ಶಾಲೆ, ನನ್ನ ಕೊಡುಗೆ ಯೋಜನೆಯಡಿ ಗ್ರಂಥಾಲಯಕ್ಕೆ ಪುಸ್ತಕ ಮತ್ತು ಪೀಠೋಪಕರಣ ದೇಣಿಗೆಯಾಗಿ ನೀಡಿರುವುದು ಶ್ಲಾಘನೀಯ. ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳ ಸೌಲಭ್ಯ ನೀಡಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದರು.

ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು. ಆರ್.ಎಸ್.ಲೋಕನ್ನವರ, ಜಿ.ಗೋವಿಂದಪ್ಪ, ಕಾಂಬಳೆ, ಎಸ್.ವಿ.ಗಿಂಡೆ, ಎಂ.ಆರ್.ಖಾಂಡೇಕರ, ಎನ್.ಎಂ.ಹಣಜ್ಯಾನಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net