ಜ್ಞಾನ ವಿಕಾಸಕ್ಕೆ ಗ್ರಂಥಾಲಯ ದಾರಿದೀಪ

21 ron 2
ರೋಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಗ್ರಂಥಾಲಯ ಪಿತಾಮಹ ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
Published on

ರೋಣ: ಗ್ರಂಥಾಲಯವು ಜ್ಞಾನ ವಿಕಾಸಕ್ಕೆ ದಾರಿದೀಪವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಗ್ರಂಥಾಲಯದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಗ್ರಂಥಪಾಲಕಿ ಬಸಮ್ಮ ತಳವಾರ ಹೇಳಿದರು.

ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಗ್ರಂಥಾಲಯ ಪಿತಾಮಹ ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಶಿಕ್ಷಕಿ ನಿರ್ಮಲಾ ನಂದಿಕೋಲಮಠ ಮಾತನಾಡಿ, ಸಾಹಿತ್ಯ, ಸಂಗೀತ, ವಿಜ್ಞಾನ, ಕಲೆ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಔದ್ಯೋಗಿಕ, ಶಿಕ್ಷಣ ಹೀಗೆ ಪ್ರತಿ ಕ್ಷೇತ್ರದ ಕುರಿತು ಆಳವಾದ ಜ್ಞಾನ ಹೊಂದಲು ಗ್ರಂಥಾಲಯಗಳು ಸಹಕಾರಿಯಾಗಿವೆ ಎಂದರು.

ಮುತ್ತಣ್ಣ ಹವಳಪ್ಪನವರ, ಪರ್ತಗೌಡ ರಾಯನಗೌಡ್ರ, ಗಣೇಶ ಕುಲಕರ್ಣಿ, ಬಸನಗೌಡ ಬಸನಗೌಡ್ರ, ಶಿಕ್ಷಕಿಯರಾದ ಹೇಮಾ ಸೂಗಿಹಿರೇಮಠ, ಶಾಂತಾ ಚಲವಾದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net