ಸ್ಪರ್ಧಾತ್ಮಕ ಪರೀಕ್ಷೆಗೆ ಗ್ರಂಥಾಲಯ ಅನುಕೂಲ

29KITTUR1
Published on

ಚನ್ನಮ್ಮನ ಕಿತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗೆ ಎದುರಿಸುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಅನುಕೂಲವಾಗಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಸಾರ್ವಜನಿಕ ಗ್ರಂಥಾಲಯ ಮಂಗಳವಾರ ಉದ್ಘಾಟಿಸಿ ಮಾತನಾಡಿ, ಬಡಕುಟುಂಬದ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಬೇಕಾಗುವ ಪುಸ್ತಕ ಖರೀದಿಸಲು ಸಾಧ್ಯವಾಗುವುದಿಲ್ಲ. ಅಂತಹವರಿಗೆ ಗ್ರಂಥಾಲಯ ಅನುಕೂಲವಾಗಲಿದೆ. ಸಾರ್ವಜನಿಕರು ಅನಗತ್ಯ ಸಮಾರಂಭಗಳಿಗೆ ವೆಚ್ಚ ಮಾಡದೆ ಗ್ರಂಥಾಲಯಗಳಿಗೆ ಪುಸ್ತಕ ನೀಡಬೇಕು ಎಂದರು.

ಈಗಾಗಲೇ ಎಲ್ಲ ಗ್ರಾಮಗಳಲ್ಲಿ ಸಣ್ಣಸಣ್ಣ ಗ್ರಂಥಾಲಯಗಳಿದ್ದು, ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯಕ್ಕೆ ಬೇಕಾಗುವ ಅವಶ್ಯ ನೀಗಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ತಹಸೀಲ್ದಾರ್​ ಕಲ್ಲನಗೌಡ ಪಾಟೀಲ ಮಾತನಾಡಿ, ಇದು ತಾಲೂಕು ಮಟ್ಟದಲ್ಲಿಯೇ ದೊಡ್ಡ ಗ್ರಂಥಾಲಯ. ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ಓದುತ್ತಲೇ ಇರಬೇಕು. ಗ್ರಂಥಾಲಯಕ್ಕೆ ಬೇಕಾಗುವ ಪುಸ್ತಕ ನೀಡಲಾಗುವುದು ಎಂದರು.

ಕ್ಷೇತ್ರ ಶಿಣಾಧಿಕಾರಿ ಸಿ.ವೆ. ತುಬಾಕದ ಮಾತನಾಡಿ, ಗ್ರಂಥಾಲಯಕ್ಕೆ ಹತ್ತು ಸಾವಿರ ರೂಪಾಯಿ ಪುಸ್ತಕ ನೀಡುವುದಾಗಿ ತಿಳಿಸಿದರು.

ಪಿಡಬ್ಲ್ಯುಡಿ ಸಂಜೀವ ಲೋಕಾಪುರ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯ ಎಂ.ಎ್​. ಜಕಾತಿ, ಗ್ರಂಥಾಲಯ ವಿಭಾಗದ ಅಧಿಕಾರಿ ರಾಮಯ್ಯ, ಅಷ್ಪಾಕ್​ ಸುತಗಟ್ಟಿ, ಅಪ್ಪಾಸಾಬ್​ ಶಿಲೆದಾರ್​, ಚಂದ್ರಗೌಡ ಪಾಟೀಲ, ಅಷ್ಪಾಕ್​ ಹವಾಲ್ದಾರ್​, ಸುನೀಲ ಘೀವಾರಿ, ಲತಾ ಮುತರೆಡ್ಡಿ, ಮಂಗಳಾ ಬುಲಬುಲೆ, ಸದುಭಾ ಪತಂಗೆ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net