ಗ್ರಂಥಾಲಯಕ್ಕೆನಿರ್ದೇಶಕರ ಭೇಟಿ

LIBRARY DIRECTOR VISIT LIBRARIES KOPPAL
ಕೊಪ್ಪಳದ ಸಾಹಿತ್ಯ ಭವನ ಹಿಂಭಾಗ ಗ್ರಂಥಾಲಯಕ್ಕೆ ಮಂಗಳವಾರ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ ಭೇಟಿ ನೀಡಿದರು.ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯ ಅಧಿಕಾರಿ ಯಮನೂರಪ್ಪ ವಟಪರವಿ, ಸಿಬ್ಬಂದಿ ಶಿವನಗೌಡ ಪಾಟೀಲ, ನಾಗರಾಜ ನಾಯಕ ಡೊಳ್ಳಿನ, ಉಮಾ, ರಾಜೇಶ್ವರಿ ಇದ್ದರು.
Published on

ಕೊಪ್ಪಳ: ಜಿಲ್ಲೆಯ ಗ್ರಂಥಾಲಯಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಸಾಹಿತ್ಯ ಭವನ ಹಿಂಭಾಗ ಹಾಗೂ ಎನ್‌ಜಿಒ ಕಾಲನಿಯ ಡಾ.ಬಿ.ಆರ್.ಅಂಬೇಡ್ಕರ್ ರೀಡಿಂಗ್ ಸೆಂಟರ್ ಗ್ರಂಥಾಲಯಕ್ಕೆ ಭೇಟಿ ನೀಡಿದರು.

ಸಾಹಿತ್ಯ ಭವನದ ಹಿಂಭಾಗದ ಗ್ರಂಥಾಲಯ ಮೇಲ್ದರ್ಜೆಗೇರಿಸಲು ಹಾಗೂ ಮೊದಲನೇ ಮಹಡಿ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಓದುಗರ ಬೇಡಿಕೆಗಳನ್ನು ಆಲಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯ ಅಧಿಕಾರಿ ಯಮನೂರಪ್ಪ ವಟಪರವಿ, ಸಿಬ್ಬಂದಿ ಶಿವನಗೌಡ ಪಾಟೀಲ, ನಾಗರಾಜ ನಾಯಕ ಡೊಳ್ಳಿನ, ಉಮಾ, ರಾಜೇಶ್ವರಿ, ವಿಜಯಲಕ್ಷ್ಮೀ, ಹುಲಿಗೆಮ್ಮ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net