ಜೆಎಸ್‌ಎಸ್‌ನಲ್ಲಿ ಏಕಕಾಲಕ್ಕೆ ಸಾವಿರ ಜನರಿಂದ ಗ್ರಂಥವಾಚನ

12 Dwd 6
Published on

ಧಾರವಾಡ: ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಸಂಸ್ಥೆಯಲ್ಲಿ ಏಕಕಾಲಕ್ಕೆ ೧,೦೦೦ ಜನರಿಂದ ಗ್ರಂಥವಾಚನ ಮಾಡುವ ಮೂಲಕ ರಾಷ್ಟಿçÃಯ ಗ್ರಂಥಾಲಯ ದಿನವನ್ನು ಶನಿವಾರ ವಿಶಿಷ್ಟವಾಗಿ ಆಚರಿಸಲಾಯಿತು.
ಸಂಸ್ಥೆಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮÁಧ್ಯಮ ಶಾಲೆಯು ಸನ್ನಿಽ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧಮÁðಽಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪತ್ನಿ ಹೇಮÁವತಿ ಹೆಗ್ಗಡೆಯವರು ಬರೆದ `ಮಗಳಿಗೊಂದು ಪತ್ರ' ಪುಸ್ತಕದ ೫೦ ಕಥೆಗಳ ಆಯ್ದ ಭಾಗಗಳನ್ನು ೫೦೦ ಹೆಣ್ಣು ಮಕ್ಕಳ ಪಾಲಕರು ಹಾಗೂ ೫೦೦ ಮಕ್ಕಳು ಒಟ್ಟಿಗೆ ಓದಿದ್ದು ಕಾರ್ಯಕ್ರಮದ ಆಕರ್ಷಣೆಯÁಗಿತ್ತು.
ಇದೇವೇಳೆ ಪುಸ್ತಕಗಳ ಪ್ರದರ್ಶನ ಮತ್ತು ಮÁರಾಟ ವ್ಯವಸ್ಥೆ ಮÁಡಲಾಗಿತ್ತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮÁನ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಮಾತನಾಡಿ, ಜ್ಞಾನಭಂಡಾರ ಕೇವಲ ಮೊಬೈಲ್ ಮತ್ತು ಅಂತರ್ಜಾಲದಲ್ಲಿ ಇಲ್ಲ. ಅಂತರ್ಜಾಲದಲ್ಲಿ ಸಿಗದ ಎಷ್ಟೋ ಮÁಹಿತಿ ಪರಿಣಿತರು ಬರೆದ ಪುಸ್ತಕಗಳಲ್ಲಿ ಲಭ್ಯ. ಹಾಗಾಗಿ ಮಕ್ಕಳು ಪುಸ್ತಕ ಓದುವುದನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು. ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಪಾಲಕರು ಮಕ್ಕಳೊಂದಿಗೆ ಕುಳಿತು ಅವರನ್ನು ಓದಿಸುವ, ಪ್ರೇರೇಪಿಸುವ ಸಲುವಾಗಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಕರ್ತ ಡಾ. ಹರ್ಷವರ್ಧನ ಶೀಲವಂತ ಮÁತನಾಡಿ, ಮಕ್ಕಳು ಓದಿನ ಜೊತೆಗೆ ಮೌ¯್ಯಗಳನ್ನು ರೂಢಿಸಿಕೊಳ್ಳಬೇಕು. ಪಾಲಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಪ್ರಾಚಾರ್ಯೆ ಉಷಾ ಸಂತೋಷ್ ಸ್ವಾಗತಿಸಿದರು. ಐ.ಟಿ.ಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಸಹ ಸಂಯೋಜಕಿಯರಾದ ನಿರ್ಮಲಾ ಪಾಟೀಕ, ಸಾವಿತ್ರಿ ಗತಾಡೆ ಹಾಗೂ ಕಮಲಾಕ್ಷಿ ಸಣ್ಣಕ್ಕಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net