ಗ್ರಂಥಾಲಯದಿಂದ ವ್ಯಕ್ತಿತ್ವ ಬದಲಾವಣೆ

chinmaya new
Published on

ಹುಬ್ಬಳ್ಳಿ : ಗ್ರಂಥಾಲಯದಿಂದ ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಚಿನ್ಮಯ ಆಡಳಿತ ಮಂಡಳಿ ಅಧ್ಯಕ್ಷ ಸಿಎ ಗಿರೀಶ ಉಪಾಧ್ಯಾಯ ಹೇಳಿದರು.

ಇಲ್ಲಿನ ಚಿನ್ಮಯ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಗ್ರಂಥಾಲಯಗಳ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥ ಅವರ ಜನ್ಮದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ವಿನಾಯಕ ಬಿ.ಕೆ., ಆಡಳಿತಾಧಿಕಾರಿ ವಿಶ್ವನಾಥ ರಾನಡೆ, ಅನ್ವರ ಮುಲ್ಲಾ, ಗ್ರಂಥಪಾಲಕ ಚಂದ್ರಶೇಖರ ಚನ್ನಂಗಿ, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net