ಗ್ರಂಥಾಲಯಗಳು ಜ್ಞಾನದ ದೇಗುಲ

LIBERARY
Published on

ಶಿರಹಟ್ಟಿ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ತೆರೆಯಲಾದ ಗ್ರಂಥಾಲಯಗಳು ಜ್ಞಾನದ ದೇಗುಲಗಳಾಗಿದ್ದು, ಅವುಗಳ ಪಾವಿತ್ರ್ಯತೆ ಕಾಪಾಡುವುದರ ಜತೆಗೆ ಸದುಪಯೋಗ ಮಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.

ಪಟ್ಟಣದ ಲೋಕಮಾನ್ಯ ಟಿಳಕ ಸಾರ್ವಜನಿಕ ಶಾಖಾ ಗ್ರಂಥಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಂಥಪಾಲಕರ ದಿನಾಚರಣೆಯ ರೂವಾರಿ ಭಾರತ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್. ರಂಗನಾಥನ್. ಜ್ಞಾನದ ಕಣಜವಾಗಿರುವ ಗ್ರಂಥಾಲಯದ ಜ್ಞಾನದ ಸವಿರುಚಿಯನ್ನು ಸಾರ್ವಜನಿಕರಿಗೆ ಉಣಬಡಿಸುವುದರ ಜತೆಗೆ ಗ್ರಂಥಾಲಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ್ದರಿಂದ ಪ್ರತಿವರ್ಷ ಆ. 12ರಂದು ಅವರ ಜನ್ಮ ದಿನಾಚರಣೆ ಸ್ಮರಣಾರ್ಥ ಗ್ರಂಥಪಾಲಕರ ದಿನ ಆಚರಿಸುತ್ತಿರುವುದು ಅವರಿಗೆ ಸಂದಗೌರವವಾಗಿದೆ ಎಂದರು.

ಶಾಖಾ ಗ್ರಂಥಾಲಯ ಸಹಾಯಕ ಸಿಬ್ಬಂದಿ ಈರಯ್ಯ ಮಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಆರ್. ಕಲ್ಯಾಣಶೆಟ್ಟರ, ಕಂದಾಯ ನಿರೀಕ್ಷಕ ಎಂ.ಬಿ. ಮುಗದುಮ್, ಲಕ್ಷ್ಮಣ ಲಮಾಣಿ, ಅಶೋಕ ಹಡಗಲಿ, ದಾದಾಪೀರ ನಗಾರಿ, ಸಂಜೀವ ಮಠ, ರಂಜನ ಕೋಳಿ, ನಾಗೇಶ ಮರಾಠೆ, ರಾಖೇಶ ಕಲಾಲ, ಡಿ.ಬಿ. ಲಮಾಣಿ, ಜಾವೇದ ಕುಬಸದ, ಸುಭಾಸ ಬಿಡವೆ, ಹೈದರಲಿ ಮನಿಯಾರ, ಸುಜನ ಕೋಳಿ, ಎಲ್.ಎಂ. ಪಾಟೀಲ, ಮುಜ್ಜು ಕೋಳಿವಾಡ ಇತರರಿದ್ದರು. ಎಂ.ಎ.ಅತ್ತಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net