ಗ್ರಂಥಪಾಲಕರ ವೇತನ ಹೆಚ್ಚಿಸಿ

18RAVIG6-Web
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ವ್ಯಾಪ್ತಿಯಲ್ಲಿನ ಸರ್ಕಾರಿ ಗ್ರಂಥಾಲಯಗಳ ಮೇಲ್ವಿಚಾರಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬಸವರಾಜ ಪನದಿ, ರಮೇಶ ಪಾಂಡವ, ಮಾರುತಿ ಢೋಳೆ ಮತ್ತಿತರರು ಉಪಸ್ಥಿತರಿದ್ದರು.
Published on

ಬೆಳಗಾವಿ : ಯಾವುದೇ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿರುವ ಗ್ರಂಥಪಾಲಕರ ವೇತನ ಹೆಚ್ಚಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಗ್ರಂಥಾಲಯಗಳ ಮೇಲ್ವಿಚಾರಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸತತ ಹೋರಾಟದ ಫಲವಾಗಿ 2016ರಲ್ಲಿ ಸರ್ಕಾರ 13,200 ರೂ. ಕನಿಷ್ಠ ವೇತನ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಕನಿಷ್ಠ ವೇತನ ನೀಡದ ಶಿಕ್ಷಣ ಇಲಾಖೆ, ಒಂದು ವರ್ಷದ ಬಳಿಕ ಅಧಿಸೂಚನೆ ಹಿಂಪಡೆದು ಕೆಲಸದ ವೇಳೆಯನ್ನು ಕಡಿತ ಗೊಳಿಸಿ 7 ಸಾವಿರ ರೂ. ವೇತನ ನಿಗದಿಪಡಿಸಿ 2017ರಲ್ಲಿ ಆದೇಶ ಹೊರಡಿಸಿತು.

ಪ್ರಸ್ತುತ ಕೋವಿಡ್-19 ಸಂದರ್ಭದಲ್ಲೂ ಯಾವುದೇ ಭದ್ರತೆ ಇಲ್ಲದಿದ್ದರೂ ಗ್ರಂಥಪಾಲಕರು ಕೆಲಸ ಮಾಡುತ್ತಿದ್ದಾರೆ. ಕೂಡಲೇ ಗ್ರಂಥಪಾಲಕರ ವೇತನ ಹೆಚ್ಚಿಸಬೇಕು. ಅಲ್ಲದೆ, ಕೋವಿಡ್-19 ಸಂದರ್ಭದಲ್ಲಿ ನೀಡುವ ಸುರಕ್ಷತಾ ಸೌಲಭ್ಯಗಳನ್ನು ನಮಗೂ ಒದಗಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಬಸವರಾಜ ಪನದಿ, ರಮೇಶ ಪಾಂಡವ, ಮಾರುತಿ ಢೋಳೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net