ಅಂಗೈಯಲ್ಲೇ ಜ್ಞಾನದ ಸಂಪನ್ಮೂಲ ಲಭ್ಯ

HUN-FEB-23-1(MAHIAL COLLEGEE PROGRAMME)
Published on

ಹುಣಸೂರು : ಜ್ಞಾನದ ಸಂಪನ್ಮೂಲಗಳು ಮುಕ್ತವಾಗಿ ದೊರಕುವ ಮೂಲಕ ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳಿಗೆ ಅಂಗೈಯಲ್ಲಿ ದೊರಕುವಂತಾಗಿದೆ ಎಂದು ಹುಲ್ಲಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ಜಯಕುಮಾರ್ ಹೇಳಿದರು. ನಗರದ ಮಹಿಳಾ ಸರ್ಕಾರಿ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಐಕ್ಯೂಎಸಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಎನ್‌ಲಿಸ್ಟ್ ಆ್ಯಂಡ್ ಓಪನ್ ಎಜುಕೇಷನಲ್ ರಿಸೋರ್ಸಸ್ ವಿಷಯದ ಕುರಿತಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾಲೇಜಿನ ಗ್ರಂಥಾಲಯದಲ್ಲಿ ಎನ್-ಲಿಸ್ಟ್ ಬಳಕೆಯಿಂದ 1 ಲಕ್ಷಕ್ಕೂ ಅಧಿಕ ಇ-ಬುಕ್ಸ್, 5 ಸಾವಿರಕ್ಕೂ ಹೆಚ್ಚು ಇ-ಜರ್ನಲ್ಸ್ ಲಭ್ಯವಿದೆ.
ಇದನ್ನು ವಿದ್ಯಾರ್ಥಿನಿಯರುಗಳು ಮುಕ್ತವಾಗಿ ಬಳಸಲು ಅನುವು ಮಾಡಿಕೊಟ್ಟಿರುವುದು ಶ್ಲಾಘನೀಯ. ಆದರೆ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇರಬೇಕಷ್ಟೇ. ಆಧುನಿಕ ತಂತ್ರಜ್ಞಾನದ ಡಿಜಿಟಲ್ ಗ್ರಂಥಾಲಯ, ಇ ಜ್ಞಾನಕೋಶ, ಪಿಜಿ ಪಾಠಶಾಲ ಮುಂತಾದ ಹಲವು ಡೇಟಾಬೇಸ್ ಆಧಾರಿತ ಶಿಕ್ಷಣ ಮುಕ್ತವಾಗಿ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಪ್ರಾಂಶುಪಾಲ ಪ್ರೊ.ಟಿ.ಕೆ.ಬೋಪಯ್ಯ ಅಧ್ಯಕ್ಷತೆವಹಿಸಿದ್ದರು. ಕಾರ್ಯಾಗಾರದ ಸಂಚಾಲಕ ಮತ್ತು ಗ್ರಂಥಪಾಲಕ ಡಾ.ಎನ್.ಕರುಣಾಕರ್ ಆಶಯ ನುಡಿಗಳನ್ನಾಡಿದರು. ಐ.ಕ್ಯೂ.ಎ.ಸಿ. ಸಂಚಾಲಕಿ ಡಾ.ಪ್ರತಿಭಾ ಜೆನ್ನಿಫರ್ ಅಂದ್ರಾದೆ, ಡಾ.ಎಚ್.ಆರ್.ವಿಶ್ವನಾಥ್, ಹನುಮಂತಪ್ಪ ಡಾ.ಬಿ.ನಂಜುಡಸ್ವಾಮಿ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net