

ಚಿಕ್ಕಮಗಳೂರು: ನಗರದ ಬಸವನಹಳ್ಳಿ ಶಾಖಾ ಗ್ರಂಥಾಲಯದಲ್ಲಿ ಸತತ ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಅಧಿಕಾರಿ ಹಾಗೂ ಮಾಜಿ ಯೋಧ ಎಚ್.ಎಂ.ಮAಜುನಾಥ ಸ್ವಾಮಿ ಅವರಿಗೆ ನಗರ ಕೇಂದ್ರ ಗ್ರಂಥಾಲಯ ಸಿಬ್ಬಂದಿ ಶನಿವಾರ ಆತ್ಮೀಯವಾಗಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ನಗರ ಕೇಂದ್ರ ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಉಮೇಶ್, ಗ್ರಂಥಾಪಾಲಕರಾದ ಬಿ.ಎಂ.ಸಿದ್ದಪ್ಪ, ರಾಘವೇಂದ್ರ, ಕೆ.ವೀಣಾ, ಬಸವನಹಳ್ಳಿ ಶಾಖಾ ಗ್ರಂಥಾಲಯ ಪ್ರಭಾರದಾರಕ ಸಿ.ಎ.ಶಂಕರೇಗೌಡ, ರೂಪ, ಭಾರತಿ ಎಚ್.ಎಂ.ಮAಜುನಾಥಸ್ವಾಮಿ, ಸಿಬ್ಬಂದಿ ಲೋಕೇಶ್, ಠಾಣಿ, ಸ್ವಪ್ನ ಮತ್ತಿತರರಿದ್ದರು.