ಗ್ರಂಥಪಾಲಕ ಹರೀಶ್‌ಗೆ ಡಾಕ್ಟರೇಟ್ ಪದವಿ

bmr (5)
Published on

ಬ್ರಹ್ಮಾವರ: ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಶ್ರೇಣಿಯ ಗ್ರಂಥಪಾಲಕ ಹರೀಶ್ ಸಿ.ಕೆ. ಸಲ್ಲಿಸಿದ ‘ಅಸೆಸ್ಮೆಂಟ್ ಆಫ್ ಇನ್ಫಾರ್ಮೇಷನ್ ಲಿಟ್ರಸಿ ಸ್ಕಿಲ್ಸ್ ಅಂಡ್ ಕಾಂಪಿಟನ್ಸಿ ಅಮಾಂಗ್ ದಿ ಫ್ಯಾಕಲ್ಟಿ ಮೆಂಬರ್ಸ್ ಆಫ್ ಫಸ್ಟ್ ಗ್ರೇಡ್ ಕಾಲೇಜೆಸ್ ಇನ್ ಕರ್ನಾಟಕ ಎ ಸ್ಟಡಿ’ ಎಂಬ ಸಂಶೋಧನಾ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಬೆಂಗಳೂರಿನ ಪ್ರಾಧ್ಯಾಪಕ ಡಾ.ಎಸ್.ಚಂದ್ರಪ್ಪ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯ ಚಿಕ್ಕಳೂರು ರತ್ನಮ್ಮ ಮತ್ತು ಕೃಷ್ಣಪ್ಪಗೌಡ ದಂಪತಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net