ಬಸವಲಿಂಗ ಶ್ರೀಗಳಿಗೆ ತುಲಾಭಾರ ಸೇವೆ

28 HLR 1
Published on

ಹೊಳೆಆಲೂರ: ಭಕ್ತರ ಮನದ ಇಚ್ಛೆ ಅರಿತು, ಅದಕ್ಕೆ ಚೌಕಟ್ಟು ಅಳವಡಿಸಿ ಸಮಾಜಮುಖಿ ಮಾರ್ಗದಲ್ಲಿ ಸಾಗುವಂತೆ ಪ್ರೇರಣೆ ನೀಡುವುದೇ ಧರ್ಮ ಎಂದು ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿಗಳು ಹೇಳಿದರು.

ಬಿ.ಎಸ್. ಬೇಲೇರಿ ಗ್ರಾಮದ ಸುಖಮುನೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸದ್ಭಕ್ತರಿಂದ ಏರ್ಪಡಿಸಿದ್ದ ತುಲಾಭಾರ ಸ್ವೀಕರಿಸಿ ಮಾತನಾಡಿ, ಈ ಶತಮಾನ ಭಾರತೀಯ ಇತಿಹಾಸದ ವೈಭವದ ಸ್ಥಿತಿಯತ್ತ ಸಾಗುತ್ತಿರುವುದು ಎಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ. ನಮ್ಮ ಭವ್ಯ ಪರಂಪರೆ, ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ರಕ್ಷಣೆ ಮಾಡಿಕೊಂಡು ಬರುತ್ತಿರುವ ರೈತ ಸಮುದಾಯ ಸೇರಿದಂತೆ ಗ್ರಾಮೀಣರ ಬದುಕು ಉನ್ನತ ಹಂತ ತಲುಪುವಂತೆ ಶ್ರಮಿಸಬೇಕಾಗಿದೆ. ದುರ್ಬಲ ವರ್ಗಗಳಿಗೆ ಸಬಲರು ಶಕ್ತಿ ತುಂಬುವ ಮೂಲಕ ಸಮಾಜದಲ್ಲಿ ಸಮಾನತೆಯ ವಾತಾವರಣ ನಿರ್ಮಿಸಬೇಕಿದೆ ಎಂದು ಹೇಳಿದರು.

ಸಣ್ಣಬಸಪ್ಪ ಹನುಮಪ್ಪ ಕರಡಿ, ಶರಣಪ್ಪ ಶಿವನಪ್ಪ ಖ್ಯಾಡದ, ರಾಮಣ್ಣ ಶಂಕ್ರಪ್ಪ ಬಡಿಗೇರ, ವೀರಭದ್ರಪ್ಪ ಮುತ್ತಪ್ಪ ಹಡಪದ, ಬಸವರಾಜ ಮಂಗಳೂರು ಕುಟುಂಬದವರು ನವಲಗುಂದ ಬಸವಲಿಂಗ ಸ್ವಾಮೀಜಿಗಳಿಗೆ ಹಾಗೂ ಬಾದಾಮಿ ಶಿವಪೂಜಾ ಶಿವಾಚಾರ್ಯರಿಗೆ ತುಲಾಭಾರ ಸೇವೆ ನೆರವೇರಿಸಿದರು. ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ರಾಮದುರ್ಗದ ಶಾಂತವೀರ ಸ್ವಾಮೀಜಿ, ಚಿಕ್ಕಮಣ್ಣೂರಿನ ಚಂದ್ರಶೇಖರ ಸ್ವಾಮೀಜಿ, ನಿಂಗಪ್ಪ ಮೇಟಿ, ಮುನವಯ್ಯ ವಸ್ತ್ರದ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net