ಮುಂಬೈ ಸಿಎಸ್‌ಎಂಟಿ -ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್‌ಗೆ ಎಲ್‌ಎಚ್‌ಬಿ ಬೋಗಿ ಅಳವಡಿಕೆ

llllllllllllllll
Published on


ಮಂಗಳೂರು : ಮುಂಬೈ ಸಿಎಸ್‌ಎಂಟಿ -ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ (ನಂ. 12133/12134) ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಇನ್ನು ಮುಂದೆ ಅತ್ಯಾಧುನಿಕ ಎಲ್‌ಎಚ್‌ಬಿ (ಲಿಂಕ್ ಹಾಪಮನ್ ಬುಷ್) ಕೋಚ್‌ಗಳೊಂದಿಗೆ ಸಂಚರಿಸಲಿದೆ.
ಜರ್ಮನಿ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿರುವ ಎಲ್‌ಎಚ್‌ಬಿ ಬೋಗಿಗಳಲ್ಲಿ ಹಿಂದಿನ ಬೋಗಿಗಳಿಂದ ಹೆಚ್ಚಿನ ಸ್ಥಳಾವಕಾಶವಿದೆ. ಆರಾಮದಾಯಕ ಆಸನ ವ್ಯವಸ್ಥೆ ಇದ್ದು ಬೋಗಿಗಳು ಹಗುರ ಇರುವುದರಿಂದ ಶಬ್ದ ಕಡಿಮೆಯಾಗಿ, ವೇಗ ಹೆಚ್ಚಿರುತ್ತದೆ.
2025ರ ಮಾ.1ರಿಂದ ಮುಂಬೈ ಸಿಎಸ್‌ಎಂಟಿ -ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (ನಂ.12133) ರೈಲಿಗೆ ಹಾಗೂ 2025ರ ಮಾ.2ರಿಂದ ಮಂಗಳೂರು ಜಂಕ್ಷನ್- ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ (ನಂ.12134) ರೈಲಿಗೆ ಎಲ್‌ಎಚ್‌ಬಿ ಬೋಗಿ
ಅಳವಡಿಕೆಯಾಗಲಿದೆ.
ಈ ಎರಡು ರೈಲುಗಳು 2-ಟು ಟಯರ್ ಎಸಿ ಕೋಚ್, 3-ತ್ರಿ ಟಯರ್ ಎಸಿ ಕೋಚ್, 5-ಸ್ಲೀಪರ್ ಕ್ಲಾಸ್ ಕೋಚ್, 4-ಜನರಲ್ ಸೆಕೆಂಡ್ ಕ್ಲಾಸ್ ಕೋಚ್, 1-ಬ್ರೇಕ್ ವ್ಯಾನ್ ಕಂ ಲಗ್ಗೇಜ್ ಸೆಕೆಂಡ್ ಕ್ಲಾಸ್ ಕೋಚ್, 1-ಜನರೇಟರ್ ಕಾರ್ ಕೋಚ್ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
.................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net