

ಮಂಗಳೂರು : ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ (ಗಾಡಿ ಸಂಖ್ಯೆ 16347/16348) ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಹಾಗೂ ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ಸಂಚರಿಸುವ (ಗಾಡಿ ಸಂಖ್ಯೆ 12620/12619) ಮತ್ಯಗಂಧ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಇನ್ನು ಮುಂದೆ ಅತ್ಯಾಧುನಿಕ ಎಲ್‌ಎಚ್‌ಬಿ (ಲಿಂಕ್ ಹಾಪಮನ್ ಬುಷ್) ಕೋಚ್‌ಗಳೊಂದಿಗೆ ಸಂಚರಿಸಲಿದೆ.
ಜರ್ಮನಿ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿರುವ ಎಲ್‌ಎಚ್‌ಬಿ ಬೋಗಿಗಳಲ್ಲಿ ಹಿಂದಿನ ಬೋಗಿಗಳಿಂದ ಹೆಚ್ಚಿನ ಸ್ಥಳಾವಕಾಶವಿದೆ. ಆರಾಮದಾಯಕ ಆಸನ ವ್ಯವಸ್ಥೆ ಇದ್ದು ಬೋಗಿಗಳು ಹಗುರ ಇರುವುದರಿಂದ ಶಬ್ದ ಕಡಿಮೆಯಾಗಿ, ವೇಗ ಹೆಚ್ಚಿರುತ್ತದೆ.
2025ರ ಫೆ.16ರಿಂದ ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ನಂ.16347) ರೈಲಿಗೆ ಹಾಗೂ ಫೆ.19ರಿಂದ ಮಂಗಳೂರು ಸೆಂಟ್ರಲ್ -ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ (ನಂ.16348) ರೈಲಿಗೆ ಎಲ್‌ಎಚ್‌ಬಿ ಬೋಗಿ ಅಳವಡಿಕೆಯಾಗಲಿದೆ.
2025ರ ಫೆ.17ರಿಂದ ಮಂಗಳೂರು ಸೆಂಟ್ರಲ್ -ಲೋಕಮಾನ್ಯ ತಿಲಕ್ ಟರ್ಮಿನಸ್ ಮತ್ಯಗಂಧ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ನಂ.12620) ರೈಲಿಗೆ ಹಾಗೂ ಫೆ.18ರಿಂದ ಲೋಕಮಾನ್ಯ ತಿಲಕ್ ಟರ್ಮಿನಸ್-ಮಂಗಳೂರು ಸೆಂಟ್ರಲ್ ಮತ್ಯಗಂಧ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ನಂ.12619) ರೈಲಿಗೆ ಎಲ್‌ಎಚ್‌ಬಿ ಬೋಗಿ ಅಳವಡಿಕೆಯಾಗಲಿದೆ.
ಈ ಎರಡು ರೈಲುಗಳು 4-ಟು ಟಯರ್ ಎಸಿ ಕೋಚ್, 2-ತ್ರಿ ಟಯರ್ ಎಸಿ ಕೋಚ್, 2-ತ್ರಿ ಟಯರ್ ಎಸಿ ಎಕಾನಮಿ ಕೋಚ್, 8-ಸ್ಲೀಪರ್ ಕ್ಲಾಸ್ ಕೋಚ್, 4-ಜನರಲ್ ಸೆಕೆಂಡ್ ಕ್ಲಾಸ್ ಕೋಚ್, 1-ಬ್ರೇಕ್ ವ್ಯಾನ್ ಕಂ ಲಗ್ಗೇಜ್ ಸೆಕೆಂಡ್ ಕ್ಲಾಸ್ ಕೋಚ್, 1-ಜನರೇಟರ್ ಕಾರ್ ಕೋಚ್ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.