ಹರ್ಷ ಮಳಿಗೆಯಲ್ಲಿ ಎಲ್‌ಜಿ ಕಂಪನಿಯ ಹೊಸ ಉತ್ಪನ್ನ ಬಿಡುಗಡೆ

IMG-20250416-WA0015.jpg
Published on

ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಹರ್ಷ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯಲ್ಲಿ ಬುಧವಾರ ಎಲ್‌ಜಿ ಕಂಪನಿಯ ಹೈಟೆಕ್ ತಂತ್ರಜ್ಞಾನ ಒಳಗೊಂಡಿರುವ ‘ರೆಫ್ರಿಜರೇಟರ್, ವಾಷಿಂಗ್ ಮಿಷನ್’ ಉತ್ಪನ್ನಗಳನ್ನು ಹರ್ಷ ಕ್ಲಸ್ಟರ್ ವ್ಯವಸ್ಥಾಪಕ ರಿತೇಶ್ ದಾಸ್, ಪ್ರೊಡೆಕ್ಟ್ ಮ್ಯಾನೇಜರ್ ಚಂದನ ರಾವ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಪ್ರತಿವರ್ಷ ಹರ್ಷ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯಲ್ಲಿ ‘ಹರ್ಷೋತ್ಸವ’ ಅಂಗವಾಗಿ ಪ್ರಸಿದ್ಧ ಬ್ರಾೃಂಡ್ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಎಲ್‌ಜಿ ಕಂಪನಿಯ ಹೈಟೆಕ್ ತಂತ್ರಜ್ಞಾನ ಒಳಗೊಂಡಿರುವ ‘ರೆಫ್ರಿಜರೇಟರ್, ವಾಷಿಂಗ್ ಮಿಷನ್’ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿತು.

ಇದೇ ಸಂದರ್ಭದಲ್ಲಿ ಹರ್ಷ ಕ್ಲಸ್ಟರ್ ವ್ಯವಸ್ಥಾಪಕ ರಿತೇಶ ದಾಸ್ ಮಾತನಾಡಿ, ಹಲವು ದಶಕಗಳಿಂದ ಎಲ್‌ಜಿ ಕಂಪನಿ ಮತ್ತು ಹರ್ಷ ಒಟ್ಟಿಗೆ ಬೆಳೆದುಕೊಂಡು ಬರುತ್ತಿವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹರ್ಷ ಮಳಿಗೆಗಳಿಗೆ ಎಲ್‌ಜಿ ಕಂಪನಿಯು ತನ್ನ ಉತ್ಪನ್ನಗಳನ್ನು ಪೂರೈಕೆ ಮಾಡಿಕೊಡುತ್ತಿದೆ. ಇದೀಗ ಹಷೋತ್ಸವದಲ್ಲಿ ಹೈಟೆಕ್ ತಂತ್ರಜ್ಞಾನವುಳ್ಳ ‘ರೆಫ್ರಿಜರೇಟರ್, ವಾಷಿಂಗ್ ಮಿಷನ್’ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿರುವುದು ಹೆಮ್ಮ ಎನಿಸುತ್ತಿದೆ ಎಂದರು.

ಎಲ್ ಜಿ ಕಂಪನಿ ಶಾಖೆ ವ್ಯವಸ್ಥಾಪಕ ನಾಗರಾಜ್ ಎಸ್. ಮಾತನಾಡಿ, ಹಲವು ವರ್ಷಗಳಿಂದ ಹರ್ಷ ತನ್ನ ಗುಣಮಟ್ಟದ ಸೇವೆ, ಉತ್ಪನ್ನಗಳಿಂದ ಖ್ಯಾತಿ ಪಡೆದುಕೊಂಡಿದೆ. ಎಲ್‌ಜಿ ಕಂಪನಿ ಮತ್ತು ಹರ್ಷ ನಡುವಿನ ಸಂಬಂಧ 38 ವರ್ಷ ಹಳೆಯದು. ಎಲ್‌ಜಿ ಕಂಪನಿಯ ಉತ್ಪನ್ನಗಳನ್ನು ಹರ್ಷ ಮಳಿಗೆಯಲ್ಲಿ ಮಾರಾಟ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಪ್ರೊಡೆಕ್ಟ್ ಮ್ಯಾನೇಜರ್ ಚಂದನ್ ರಾವ್, ಮಾರುಕಟ್ಟೆ ವ್ಯವಸ್ಥಾಪಕ ಮಲ್ಲಿಕಾರ್ಜುನ್.ಕೆ., ಎಎಸ್‌ಎಂ ಸಿದ್ದನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net