

ಬೆಂಗಳೂರು: ತೃತೀಯ ಲಿಂಗಿಗಳು, ಸಲಿಂಗಿಗಳ ಕುರಿತು ನಕಾರಾತ್ಮಕ ಧೋರಣೆ ಕೈಬಿಟ್ಟು, ಅವರನ್ನು ಮುಖ್ಯ ವಾಹಿನಿಗೆ ಕರೆ ತರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಮ್ಮ ಬೆಂಗಳೂರು ಆಶ್ರಯದೊಂದಿಗೆ ನವೆಂಬರ್‌ನಲ್ಲಿ ಕೈಗೊಳ್ಳಲಿರುವ ಪ್ರಥಮ ಆವೃತ್ತಿಯ ಎಲ್‌ಜಿಬಿಟಿಕ್ಯೂ ಈಕ್ವಾಲಿಟಿ ್ರೈೆಡ್ ಮ್ಯಾರಥಾನ್‌ನ ಪೂರ್ವಭಾವಿ ಕಾರ್ಯಕ್ರಮವನ್ನು ನಗರದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್‌ಜಿಬಿಟಿಕ್ಯೂ ಸಮುದಾಯದ ಪರವಾಗಿರುವ ಇರೈವಿ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಸಮುದಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಮ್ಯಾರಥಾನ್ ಸ್ವಾಗತಾರ್ಹ ಎಂದ ಅವರು, ತೃತೀಯ ಲಿಂಗಿಗಳು ಪ್ರಕೃತಿಯ ಸೃಷ್ಟಿಯಾದರೆ, ಸಲಿಂಗಿಗಳು ಸ್ವಇಚ್ಛೆಯಿಂದ ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಸೇರಿದ್ದಾರೆ. ಇವರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿದ್ದು, ಸುಪ್ರೀಂಕೋರ್ಟ್ ಕೂಡ ಇವರ ಪರ ತೀರ್ಪು ನೀಡಿದೆ ಎಂದು ತಿಳಿಸಿದರು.
ಇಷ್ಟೆಲ್ಲ ರಕ್ಷಣೆ ಇದ್ದರೂ, ಸಮಾಜ ಸಾಕಷ್ಟು ಮುಂದುವರಿದಿದ್ದರೂ ಜನರು ಮಾತ್ರ ಈ ಸಮುದಾಯವನ್ನು ತಿರಸ್ಕಾರ ಮನೋಭಾವ ಮತ್ತು ನಕಾರಾತ್ಮಕ ಧೋರಣೆಯಿಂದ ನೋಡುತ್ತಿದ್ದಾರೆ. ಇದನ್ನು ತಪ್ಪಿಸಿ ಅವರೂ ಸಮಾಜದ ಮುಖ್ಯ ವಾಹಿನಿಗೆ ಸೇರಿದವರು ಎಂದು ಪರಿಗಣಿಸುಂತಾಗಬೇಕು ಎಂದರು.
ತೃತೀಯ ಲಿಂಗಿಗಳು, ಸಲಿಂಗ ಕಾಮಿಗಳನ್ನು ಅವರ ಕುಟುಂಬದವರೂ ಒಪ್ಪಿಕೊಳ್ಳುವುದಿಲ್ಲ. ಮನೆಯಲ್ಲಿರಲು ಅವಕಾಶ ನೀಡುವುದಿಲ್ಲ. ಇದರಿಂದಾಗಿ ಆ ಸಮುದಾಯ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳನ್ನು ಎದುರಿಸುವಂತಾಗುತ್ತದೆ. ತಾವು ಸಲಿಂಗ ಕಾಮಿಗಳು ಎಂದು ಸಮಾಜದಲ್ಲಿ ಧೈರ್ಯವಾಗಿ ಹೇಳಿಕೊಳ್ಳುವ ಪರಿಸ್ಥಿಯಲ್ಲೂ ಆ ಸಮುದಾಯ ಇರುವುದಿಲ್ಲ. ಅವರ ಇಚ್ಛೆಯಂತೆ ಬದುಕುತ್ತಿರುವವರನ್ನು ಸಮಾಜ ತಿರಸ್ಕಾರ ಮನೋಭಾವದಿಂದ ಕಾಣಬಾರದು ಎಂದು ಹೇಳಿದರು.
ಇರೈವಿ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕಿ ವಿಜಯ ಮೇರಿ, ಸಿಇಒ ಝೆಹ್ರಾ ಾತಿಮಾ, ರಾಜ್ಯ ಅಲ್ಪಸಂಖ್ಯಾತರ ನಿಗಮದ ಮಾಜಿ ಅಧ್ಯಕ್ಷ ಡಾ. ಮಸೂದ್ ೌಜ್ ದಾರ್, ಸ್ಪರ್ಷ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ವಿಭಾಗದ ಮುಖ್ಯಸ್ಥ ಡಾ. ಎಂ.ಜಾನ್ ಪೌಲ್, ಎನ್‌ಬಿಎಸ್‌ಎಸ್ ವೈದ್ಯಕೀಯ ವಿಭಾಗದ ಡಾ. ಸೋಮಶೇಖರ್ ಇತರರು ಇದ್ದರು.