ಎಲ್​ಜಿ ಕಂಪನಿಯ ಹೊಸ ಉತ್ಪನ್ನ ಬಿಡುಗಡೆ

16manju3
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 44;
Published on

ಬೆಳಗಾವಿ: ಇಲ್ಲಿನ ಕ್ಲಬ್​ ರಸ್ತೆಯಲ್ಲಿರುವ ಹರ್ಷ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯಲ್ಲಿ ಬುಧವಾರ ಎಲ್​ಜಿ ಕಂಪನಿಯ ಹೈಟೆಕ್​ ತಂತ್ರಜ್ಞಾನ ಒಳಗೊಂಡಿರುವ "ರೆಫ್ರಿಜರೇಟರ್​, ವಾಷಿಂಗ್​ ಮಿಷನ್​' ಉತ್ಪನ್ನಗಳನ್ನು ಹರ್ಷ ಕ್ಲಸ್ಟರ್​ ವ್ಯವಸ್ಥಾಪಕ ರಿತೇಶ್​ ದಾಸ್​, ಪ್ರೊಡೆಕ್ಟ್​ ಮ್ಯಾನೇಜರ್​ ಚಂದನ ರಾವ್​ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಪ್ರತಿವರ್ಷ ಹರ್ಷ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯಲ್ಲಿ "ಹಷೋರ್ತ್ಸವ' ಅಂಗವಾಗಿ ಪ್ರಸಿದ್ಧ ಬ್ರಾಂಡ್​ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಎಲ್​ಜಿ ಕಂಪನಿಯ ಹೈಟೆಕ್​ ತಂತ್ರಜ್ಞಾನ ಒಳಗೊಂಡಿರುವ "ರೆಫ್ರಿಜರೇಟರ್​, ವಾಷಿಂಗ್​ ಮಿಷನ್​' ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿತು.

ಇದೇ ಸಂದರ್ಭದಲ್ಲಿ ಹರ್ಷ ಕ್ಲಸ್ಟರ್​ ವ್ಯವಸ್ಥಾಪಕ ರಿತೇಶ ದಾಸ್​ ಮಾತನಾಡಿ, ಹಲವು ದಶಕಗಳಿಂದ ಎಲ್​ಜಿ ಕಂಪನಿ ಮತ್ತು ಹರ್ಷ ಒಟ್ಟಿಗೆ ಬೆಳೆದುಕೊಂಡು ಬರುತ್ತಿವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹರ್ಷ ಮಳಿಗೆಗಳಿಗೆ ಎಲ್​ಜಿ ಕಂಪನಿಯು ತನ್ನ ಉತ್ಪನ್ನಗಳನ್ನು ಪೂರೈಕೆ ಮಾಡಿಕೊಡುತ್ತಿದೆ. ಇದೀಗ ಹಷೋತ್ಸವದಲ್ಲಿ ಹೈಟೆಕ್​ ತಂತ್ರಜ್ಞಾನವುಳ್ಳ "ರೆಫ್ರಿಜರೇಟರ್​, ವಾಷಿಂಗ್​ ಮಿಷನ್​' ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿರುವುದು ಹೆಮ್ಮ ಎನಿಸುತ್ತಿದೆ ಎಂದರು.

ಎಂಜಿ ಕಂಪನಿ ಶಾಖೆ ವ್ಯವಸ್ಥಾಪಕ ನಾಗರಾಜ್​ ಎಸ್​. ಮಾತನಾಡಿ, ಹಲವು ವರ್ಷಗಳಿಂದ ಹರ್ಷ ತನ್ನ ಗುಣಮಟ್ಟದ ಸೇವೆ, ಉತ್ಪನ್ನಗಳಿಂದ ಖ್ಯಾತಿ ಪಡೆದುಕೊಂಡಿದೆ. ಎಲ್​ಜಿ ಕಂಪನಿ ಮತ್ತು ಹರ್ಷ ನಡುವಿನ ಸಂಬಂಧ 38 ವರ್ಷ ಹಳೆಯದು. ಎಲ್​ಜಿ ಕಂಪನಿಯ

ಉತ್ಪನ್ನಗಳನ್ನು ಹರ್ಷ ಮಳಿಗೆಯಲ್ಲಿ ಮಾರಾಟ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಪ್ರೊಡೆಕ್ಟ್​ ಮ್ಯಾನೇಜರ್​ ಚಂದನ್​ ರಾವ್​, ಮಾರುಕಟ್ಟೆ ವ್ಯವಸ್ಥಾಪಕ ಮಲ್ಲಿಕಾರ್ಜುನ್​.ಕೆ., ಎಎಸ್​ಎಂ ಸಿದ್ದನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net