ನನಗೆ ಪತ್ರ ಬಂದಿದೆ, ನೋಟಿಸ್ ಅಲ್ಲ ಎಂದ ಜಮೀರ್ ಅಹ್ಮದ್

jameer 1
Published on

ದಾವಣಗೆರೆ: ಹೈಕಮಾಂಡ್‌ನಿಂದ ಇದುವರೆಗೆ ತಮಗೆ ನೋಟಿಸ್ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅದು ನೋಟಿಸ್ ಅಲ್ಲ, ಪತ್ರ. ತಾವು ಜಿಲ್ಲೆಗಳ ಪ್ರವಾಸದಲ್ಲಿದ್ದು ಬೆಂಗಳೂರಿಗೆ ಹೋದ ನಂತರ ನೋಡುವುದಾಗಿ ತಿಳಿಸಿದರು.

ನೋಟಿಸ್ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇವತ್ತು ದಾವಣಗೆರೆಯಲ್ಲಿದ್ದೇನೆ, ಇಲ್ಲಿಂದ ಚಿತ್ರದುರ್ಗಕ್ಕೆ ಹೋಗುವೆ ಎಂದು ಹೇಳಿದರು.

ಜಮೀರ್ ಹೆಸರು ಪ್ರಸ್ತಾಪಿಸಿದರೆ ಡಿ.ಕೆ. ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ಪ್ರಶ್ನೆಗೆ, ‘ಅವರು ಅಧ್ಯಕ್ಷರು, ದೊಡ್ಡವರಿದ್ದಾರೆ’ ಎಂದು ಡಿಕೆಶಿಗೆ ಟಾಂಗ್ ನೀಡಿದರು.

ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಸಲ್ಲಿಸಲು ಕಾಲಾವಕಾಶ ಕೇಳಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಸಮಾರಂಭಕ್ಕೆ ರಾಹುಲ್ ಗಾಂಧಿ ಬರಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net