ನೇಕಾರರಿಂದ ಪತ್ರ ಚಳವಳಿ

patra chalavali
ಬನಹಟ್ಟಿಯ ಅಂಚೆ-ಇಲಾಖೆ ಮುಂಭಾಗದಲ್ಲಿನ ಅಂಚೆ ಪೆಟ್ಟಿಗೆಯಲ್ಲಿ ನೇಕಾರರು ಸರದಿಯಲ್ಲಿ ನಿಂತು ಪತ್ರ ಹಾಕುತ್ತಿರುವುದು.
Published on

ರಬಕವಿ/ಬನಹಟ್ಟಿ: ರಾಜ್ಯದ ನೇಕಾರರಿಗೆ ಬಜೆಟ್‌ನಲ್ಲಿ ಘೋಷಿಸಿರುವಂತೆ 10 ಎಚ್‌ಪಿವರೆಗಿನ ನೇಕಾರರಿಗೆ ಉಚಿತ ವಿದ್ಯುತ್‌ನ್ನು ಯಾವುದೇ ಷರತ್ತಿಲ್ಲದೆ ಅಧಿಕತ ಜಾರಿಗೆ ತರಬೇಕೆಂದು ಒತ್ತಾಯಿಸಿ ರಬಕವಿ- ಬನಹಟ್ಟಿಯ ಅಂದಾಜು 2 ಸಾವಿರ ನೇಕಾರರು ಪತ್ರ ಚಳವಳಿ ನಡೆಸಿದರು.

ಬನಹಟ್ಟಿಯ ಅಂಚೆ-ಇಲಾಖೆ ಮುಂಭಾಗದಲ್ಲಿನ ಅಂಚೆ ಪೆಟ್ಟಿಗೆ ಮುಂದೆ ಮಂಗಳವಾರ ಸರದಿಯಲ್ಲಿ ನಿಂತು ಪತ್ರ ರವಾನಿಸಿದರು. ಸರಳೀಕರಣದೊಂದಿಗೆ, ಯಾವುದೇ ದ್ವಂದ್ವ ನಿಲುವು ಕೈಗೊಳ್ಳದೆ 10 ಎಚ್‌ಪಿವರೆಗಿನ ನೇಕಾರರಿಗೆ ಉಚಿತ ವಿದ್ಯುತ್ ಕಲ್ಪಿಸಬೇಕು ಎಂದರು.

ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಮುಖ್ಯಮಂತ್ರಿ, ರಾಜ್ಯಪಾಲರಿಗೆ, ಇಂಧನ ಹಾಗೂ ಜವಳಿ ಸಚಿವರಿಗೆ ಪ್ರತ್ಯೇಕ ಪತ್ರಗಳನ್ನು ರವಾನಿಸಲಾಗಿದ್ದು, ಈ ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net