

ನೊಣವಿನಕೆರೆ: ತಿಪಟೂರು ತಾಲೂಕು ನೊಣವಿನಕೆರೆ ಶ್ರೀ ಉಡಿಸಲ ಕೆಂಪಮ್ಮದೇವಿ ಸಮುದಾಯ ಭವನದಲ್ಲಿ ಹೋಬಳಿ ವಿಶ್ವಕರ್ಮ ಬಂಧುಗಳು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಬುಧವಾರ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೇಸ್ ಆಧ್ಯಕ್ಷ ನಿಖಿಲ್ ರಾಜಣ್ಣ, ಹೋಬಳಿಮಟ್ಟದಲ್ಲಿ ಸಂಟಿತರಾಗಿ ವಿಶ್ವಕರ್ಮ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಜಯಂತಿ ಆಚರಣೆ, ವಿವಿಧ ಯೋಜನೆಗಳ ಜಾರಿ, ನಿಗಮ ಸ್ಥಾಪನೆ ಮಾಡಿದೆ. ಮುಂದಿನ ದಿನಗಳಲ್ಲಿ ವಿಶ್ವಕರ್ಮ ಜನಾಂಗದ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ಕೆಲಸಮಾಡುತ್ತೇವೆ ಎಂದರು.
ಪಿಎಂಶ್ರೀ ಕೆಪಿಎಸ್ ಶಾಲೆ ಪದವೀದರ ಮುಖ್ಯಶಿಕ್ಷಕ ಎಸ್.ಆರ್.ಸುರೇಶ್ ಮಾತನಾಡಿ, ದೇಶದ ವಾಸ್ತುಶಿಲ್ಲ ಕಲೆಗಳಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ಬಹುಮುಖ್ಯ ಪಾತ್ರವಹಿಸಿದೆ.
ರಾಜ್ಯ ಹಾಗೂ ದೇಶದ ಅನೇಕ ದೇವಾಲಯಗಳ ವಾಸ್ತುಶಿಲ್ಪ ಇದಕ್ಕೆ ಪ್ರತ್ಯಕ್ಷ ಸಾಯಾಗಿದ್ದು, ದೇಶದ ಸಂಸತಿಗೆ ಜನಾಂಗದ ಅನೇಕ ನಾಯಕರು ತಮ್ಮದೆಯಾದ ಕೊಡುಗೆ ನೀಡಿದ್ದರಿಂದ ಇಂದು ವಿಶ್ವವೇ ಭಾರತದ ಕಲೆಯನ್ನು ಗೌರವಿಸುತ್ತಿದೆ ಎಂದರು.
ನಂತರ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷ ಧನಂಜಯ್, ಸದಸ್ಯರಾದ ಹರೀಶ್, ರುಚಂದನ್, ತಾಪಂ ಮಾಜಿ ಉಪಾಧ್ಯಕ್ಷ ಎನ್.ಶಂಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುರೇಶ್, ಮೇಲ್ವಿಚಾರಕ ಮುನಿಕೃಷ್ಣ, ಜೆಡಿಎಸ್ ಯುವ ಮುಖಂಡ ರಾಕೇಶ್, ಸಮಾಜ ಸೇವಕ ದಯಾನಂದ್ ಕಾಬೋರಪ್ಪ ಇತರರು ಇದ್ದರು.