ಜನಪದ ಕಲೆ ಉಳಿಸಿ, ಬೆಳೆಸುವ ಕೆಲಸವಾಗಲಿ

MDG JANAPADA
Published on

ಮುಂಡರಗಿ: ಜನಪದವು ಎಲ್ಲ ಕಲೆಗಳ ಮೂಲಬೇರು. ನಾವೆಲ್ಲರೂ ಜನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಯುವ ಪೀಳಿಗೆಗೆ ಜನಪದ ಕಲೆಯ ಬಗ್ಗೆ ತಿಳಿಸಬೇಕು ಎಂದು ಪ್ರಾಚಾರ್ಯ ಎಸ್.ಆರ್. ಚಿಗರಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜ್​ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಪದ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕ ತಿಮ್ಮನಾಯಕ ಮಾತನಾಡಿ, ಜನಪದ ಪ್ರತಿಯೊಬ್ಬರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಜನಪದ ನಮ್ಮೊಂದಿಗೆ ಒಂದಿಲ್ಲೊಂದು ರೀತಿಯ ಸಂಬಂಧ ಹೊಂದಿದೆ. ಜನಪದ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳು ವಿವಿಧ ಜನಪದ ಕಲಾ ಪ್ರದರ್ಶನ ನೀಡಿದರು. ಸಾಮೂಹಿಕ ಭೋಜನ ಸವಿದರು. ವಿದ್ಯಾರ್ಥಿನಿಯರು ಪೂರ್ಣಕುಂಭ ಮೆರವಣಿಗೆ ಮಾಡಿದರು. ವಿದ್ಯಾರ್ಥಿಗಳು ದೇಸಿ ಉಡುಪುಗಳಲ್ಲಿ ಕಂಗೊಳಿಸಿದರು.

ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯರಾದ ಅರುಣಾ ಪಾಟೀಲ, ಆರ್.ಎಸ್. ಪಾಟೀಲ, ಪ್ರಾಧ್ಯಾಪಕರಾದ ಎಂ.ಬಿ. ಬದನಿಕಾಯಿ, ಡಾ. ಜಗದೀಶ ಹುಲ್ಲೂರು, ಉಮಾ ಕೊಳ್ಳಿ, ಡಾ.ಭಾರತಿ ಬ್ಯಾಳಿ, ಯಮುನಾ ನಾಯ್ಕ ಎಂ., ಕಾವೇರಿ ಭೋಲಾ, ಕರಿಬಸಪ್ಪ ಇತರರಿದ್ದರು. ಶ್ವೇತಾ ಪ್ರಾರ್ಥಿಸಿದರು. ಹನುಮಂತಪ್ಪ ಸ್ವಾಗತಿಸಿದರು. ಡಾ.ಎಲ್. ಮೀಟ್ಯಾನಾಯ್ಕ ಹಾಗೂ ಸಂತೋಷ ಕಾಗನೂರು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net