ಯುವಜನರಿಗೆ ಮೌಲ್ಯ ತಿಳಿಸುವ ಕೆಲಸವಾಗಲಿ

ಚನ್ನರಾಯಪಟ್ಟಣದ ರಾಧಾಕೃಷ್ಣ ವಿದ್ಯಾ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿ.ಎನ್.ಜಗದೀಶ್ ಉದ್ಘಾಟಿಸಿದರು.   ಕಾರ್ತಿಕ್ ಸೆಲ್ವರಾಜು, ಕೆ.ಎನ್.ಸುಂದರ್‌ರಾಜು, ಎ.ಡಿ.ಕುಮಾರ್, ಬಿ.ವಿ.ವಿಜಯ್, ಅನಿಲ್ ಇದ್ದರು.
ಚನ್ನರಾಯಪಟ್ಟಣದ ರಾಧಾಕೃಷ್ಣ ವಿದ್ಯಾ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿ.ಎನ್.ಜಗದೀಶ್ ಉದ್ಘಾಟಿಸಿದರು. ಕಾರ್ತಿಕ್ ಸೆಲ್ವರಾಜು, ಕೆ.ಎನ್.ಸುಂದರ್‌ರಾಜು, ಎ.ಡಿ.ಕುಮಾರ್, ಬಿ.ವಿ.ವಿಜಯ್, ಅನಿಲ್ ಇದ್ದರು.
Published on

ಚನ್ನರಾಯಪಟ್ಟಣ: ದೇಶದ ಯುವಜನರಿಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಸಂವಿಧಾನ ದಿನ ಆಚರಿಸಲಾಗುತ್ತಿದೆ ಎಂದು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಎನ್.ಜಗದೀಶ್ ತಿಳಿಸಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ರಾಧಾಕೃಷ್ಣ ವಿದ್ಯಾ ಶಾಲೆ, ರೋಟರಿ ಕ್ಲಬ್ ಸಹಯೋಗದಲ್ಲಿ ಪಟ್ಟಣದ ರಾಧಾಕೃಷ್ಣ ವಿದ್ಯಾ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

1950ರ ಜ.26ರಂದು ಸಂವಿಧಾನ ಅಸ್ತಿತ್ವಕ್ಕೆ ಬಂತು. ಭಾರತದ ಸಂವಿಧಾನವು 448 ವಿಧಿಗಳು, 25 ಭಾಗಗಳು, 12 ಷೆಡ್ಯೂಲ್, 5 ಅನುಬಂಧ, 98 ತಿದ್ದುಪಡಿ ಹೊಂದಿದೆ. 2015ರಿಂದ ಸಂವಿಧಾನ ದಿನ ಆಚರಣೆಗೆ ಬಂತು. ಇದಕ್ಕೂ ಮೊದಲು ಈ ದಿನವನ್ನು ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು ಎಂದರು.

ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸುವುದರ ಜತೆಗೆ ಸರ್ವರಿಗೂ ಸಮಾನತೆ ಒದಗಿಸಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ಇದರ ಮಹತ್ವವವನ್ನು ಎಲ್ಲರಿಗೂ ತಿಳಿಸುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ತಿಳಿಸಿದರು.

ಸಂವಿಧಾನದ ಮಹತ್ವ ಕುರಿತು ವಕೀಲೆ ಚಂದನಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ರಾಧಾಕೃಷ್ಣ ವಿದ್ಯಾ ಶಾಲೆ ಮುಖ್ಯ ಶಿಕ್ಷಕ ಕಾರ್ತಿಕ್ ಸೆಲ್ವರಾಜು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಂದರ್‌ರಾಜು, ಕಾರ್ಯದರ್ಶಿ ಎ.ಡಿ.ಕುಮಾರ್, ಚನ್ನರಾಯಪಟ್ಟಣ ರೋಟರಿ ಕ್ಲಬ್ ಅಧ್ಯಕ್ಷ ಬಿ.ವಿ.ವಿಜಯ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಅನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net