ಲಾಭದತ್ತ ಡೇರಿ ಕೊಂಡೊಯ್ಯಲು ಶ್ರಮ ವಹಿಸಲಿ

10 yelandur 01
filter: 0; fileterIntensity: 0.0; filterMask: 0; module: photo; hw-remosaic: false; touch: (-1.0, -1.0); modeInfo: HDR ; sceneMode: 2; cct_value: 5321; AI_Scene: (-1, -1); aec_lux: 179.72134; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: -1; weatherinfo: null; temperature: 34;
Published on

ಚಾಮರಾಜನಗರ: ಯಳಂದೂರು ತಾಲೂಕಿನ ಯರಿಯೂರು ಡೇರಿಗೆ ದಶಕಗಳ ಇತಿಹಾಸವಿದೆ. ಮೊದಲು ಇದು ತಾಲೂಕಿನ ಉತ್ತಮ ಡೇರಿ ಎನಿಸಿಕೊಂಡಿತ್ತು. ಈಗಲೂ ಇದನ್ನು ತಾಲೂಕಿನಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಸದಸ್ಯರು ನಿರ್ದೇಶಕರು, ಹಾಲು ಉತ್ಪಾದಕರು ಶ್ರಮಿಸಬೇಕು ಎಂದು ಯರಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜೆ.ಯೋಗೇಶ್ ಕರೆ ನೀಡಿದರು.


ಯರಿಯೂರು ಗ್ರಾಮದ ಸಂಘದ ಕಚೇರಿಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಡೇರಿಗೆ 44 ವರ್ಷಗಳ ಇತಿಹಾಸವಿದೆ. ಇಲ್ಲಿ ನೂರಾರು ಸದಸ್ಯರಿದ್ದಾರೆ. ಪ್ರಸಕ್ತ ವರ್ಷದಲ್ಲಿ 4.49 ಲಕ್ಷ ಲಾಭ ಬಂದಿದೆ. ಇದರಲ್ಲಿ 3.60 ಲಕ್ಷ ರೂ. ಆಡಳಿತಾತ್ಮಕ ವೆಚ್ಚವಾಗಿದೆ. ಲೆಕ್ಕ ಪರಿಶೋಧನಾ ಶುಲ್ಕ, ಡೆಡ್‌ಸ್ಟಾಕ್ ಸವಕಳಿ, ಎಎಂಸಿ ಸೇರಿದಂತೆ ಇತರ 36,307 ರೂ. ಖರ್ಚು ಮಾಡಲಾಗಿದೆ. ಇದನ್ನು ಹೊರತುಪಡಿಸಿ 2023-24ನೇ ಸಾಲಿನಲ್ಲಿ ನಮ್ಮ ಸಂಘಕ್ಕೆ 85,563 ರೂ. ನಿವ್ವಳ ಲಾಭ ದೊರಕಿದೆ. ಇದು ಇನ್ನೂ ಹೆಚ್ಚಬೇಕು.

ಇದಕ್ಕೆ ಗುಣಮಟ್ಟದ ಹಾಲು ಪೂರೈಸುವಂತೆ ಹೈನುಗಾರರಿಗೆ ಒತ್ತಡ ಹೇರಬೇಕು. ಜತೆಗೆ ಸರ್ಕಾರದಿಂದ ದೊರಕುವ ಸಬ್ಸಿಡಿ ಸಾಲ, ಮೇವು, ವಿಮೆ ಹಾಗೂ ಇತರ ಸೌಲಭ್ಯಗಳನ್ನು ಹೈನುಗಾರರಿಗೆ ನೀಡಲು ಹೆಚ್ಚಿನ ಗಮನ ಕೇಂದ್ರೀಕರಿಸಲಾಗುವುದು. ತಾಲೂಕಿನಲ್ಲಿ ಇದನ್ನು ಮತ್ತೆ ಪ್ರಥಮ ಸ್ಥಾನಕ್ಕೆ ತರಲು ಎಲ್ಲ ರೀತಿಯ ಪ್ರಮಾಣಿಕ ಪ್ರಯತ್ನಮಾಡಲಾಗುವುದು ಎಂದು ಹೇಳಿದರು.


ಸಂಘದ ಉಪಾಧ್ಯಕ್ಷ ಮಹೇಶ, ಮೈಮುಲ್ ಮಾಜಿ ನಿರ್ದೇಶಕ ಚಿಕ್ಕಮಾದಯ್ಯ, ಸಹಾಯಕ ವ್ಯವಸ್ಥಾಪಕ ಜಿ.ಪ್ರಭು, ಕಾರ್ಯನಿರ್ವಾಹಕ ಅಧಿಕಾರಿ ಪಿ.ಚೇತನ್, ನಿರ್ದೇಶಕರಾದ ನಂಜುಂಡೇಗೌಡ, ಬಸವಣ್ಣ, ರಂಗದಾಸಯ್ಯ, ಎಸ್.ನಾರಾಯಣ್, ಶಿವಶಂಕರಾಚಾರ್, ಮರಂಕಮ್ಮ, ಹಾಲು ಪರೀಕ್ಷಕ ಎಂ.ರೇವಣ್ಣ, ಕೆಂಪಮ್ಮ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net