ಜೆಡಿಎಸ್ ಬಲವರ್ಧನೆಗೆ ಶ್ರಮಿಸೋಣ: ಕಡಿದಾಳ್ ಗೋಪಾಲ್ ಸಲಹೆ

25hos2p vartesh
ಹೊಸನಗರ ತಾಲೂಕು ಜೆಡಿಎಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಎಂ.ವರ್ತೇಶ್ ಅವರನ್ನು ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಸನ್ಮಾನಿಸಿದರು. ಎಂ.ವಿ.ಜಯರಾಮ್, ರಾಮಕೃಷ್ಣ, ಸಂಗಯ್ಯ, ಗೀತಾ ಗಣೇಶ್, ಸುಮತಿ ಆರ್.ಪೂಜಾರ್ ಇತರರಿದ್ದರು.
Published on

ಹೊಸನಗರ: ಶಿವಮೊಗ್ಗ ಜಿಲ್ಲೆ ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆ ಆಗಿತ್ತು. ಈಗಲೂ ಪಕ್ಷದ ಅಸ್ಥಿತ್ವ ಸುಭದ್ರವಾಗಿದೆ. ಹಗಲಿರುಳು ಪಕ್ಷಕ್ಕಾಗಿ ಕೆಲಸ ಮಾಡುವ ಮತದಾರರಿದ್ದು ಅವರನ್ನು ಒಂದು ಮಾಡುವ ಪ್ರಾಮಾಣಿಕ ಕಾರ್ಯ ಆಗಬೇಕಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಜೆಡಿಎಸ್ ನೂತನ ತಾಲೂಕು ಅಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೆಡಿಎಸ್ ಜನಪರ ಪಕ್ಷವಾಗಿದ್ದು ಹಳ್ಳಿ ಹಳ್ಳಿಯಲ್ಲೂ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿದ್ದಾರೆ. ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಕಾರ್ಯಕ್ರಮ ನಡೆಯುತ್ತಿದೆ. ಅದೇ ರೀತಿ ಹೋಬಳಿ, ಬೂತ್ ಮಟ್ಟದಲ್ಲೂ ಪಕ್ಷ ಸಂಘಟನೆಗೆ ಕೆಲಸ ಮಾಡಬೇಕಾದ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಎಂ.ವರ್ತೇಶ್ ಮಾತನಾಡಿ, ಎಲ್ಲ ತಾಲೂಕಿನಲ್ಲೂ ಪಕ್ಷ ಸಂಘಟಿಸಲಾಗುವುದು. ಬೂತ್ ಪದಾಽಕಾರಿಗಳ ಆಯ್ಕೆ ನಡೆಸಿ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಚುರುಕು ಮುಟ್ಟಿಸಲಾಗುವುದು ಎಂದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬಲಗೊಳ್ಳುತ್ತಿದೆ. ಹಾಗಾಗಿ ಪಕ್ಷದ ಮುಖಂಡರು ಪ್ರಾಮಾಣಿಕರನ್ನು ಗುರುತಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷ ಮತ್ತೊಮ್ಮೆ ಎದ್ದು ನಿಲ್ಲಲಿದೆ ಎಂದರು.
ಮಾಜಿ ಅಧ್ಯಕ್ಷ ಎಂ.ವಿ.ಜಯರಾಮ್, ಜಿಲ್ಲಾ ಸಮಿತಿಯ ರಾಮಕೃಷ್ಣ, ಸಂಗಯ್ಯ, ಗೀತಾ ಗಣೇಶ್, ಸುಮತಿ ಆರ್.ಪೂಜಾರ್, ಭಾಗ್ಯಾ ಗೋಪಾಲಕೃಷ್ಣ, ಎಂ.ಪಿ.ರಮಾನAದ್, ಷಣ್ಮುಖಪ್ಪ, ವಾಸಪ್ಪ ಗೌಡ ಜಯನಗರ, ಎಚ್.ಆರ್.ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net