ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಶ್ರಮಿಸೋಣ

Human Trafficking Awareness Rally
Published on

ಯಲ್ಲಾಪುರ: ಮಾನವ ಕಳ್ಳಸಾಗಾಣಿಕೆಯಲ್ಲಿ ಭಾರತ ಪ್ರಪಂಚದಲ್ಲೇ ಮೂರನೇ ಸ್ಥಾನದಲ್ಲಿದೆ. ಇದನ್ನು ತಡೆಗಟ್ಟಲು ಎಲ್ಲರೂ ಒಂದಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಪಾಟೀಲ ಹೇಳಿದರು.

ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ಹಾಗೂ ಬಹಿಷ್ಕಾರ ಪದ್ಧತಿ ನಿಮೂಲನಾ ಜಾಗೃತಿ ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಹಿಷ್ಕಾರ ಪದ್ಧತಿ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದ್ದು, ಸಂಪೂರ್ಣ ನಿಮೂಲನೆಯಾಗುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.

ಮಾನವ ಕಳ್ಳಸಾಗಾಣಿಕೆ ತಡೆ ಹಾಗೂ ಬಹಿಷ್ಕಾರ ಪದ್ಧತಿ ನಿಮೂಲನಾ ದಿನಾಚರಣೆ ಕುರಿತು ವಕೀಲ ಗಣೇಶ ಭಟ್ಟ ಉಪನ್ಯಾಸ ನೀಡಿದರು.

ತಹಸೀಲ್ದಾರ್ ಅಶೋಕ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಝೀನತ್ ಭಾನು ಶೇಖ್, ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಪ್ರಮೋದಾ ಪಟಗಾರ, ಸಿಪಿಐ ರಮೇಶ ಹನಾಪುರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜ್ಯೋತಿ ನಟೋರಿ, ಪ್ರಾಂಶುಪಾಲ ಸಂಜಯ ನಾಯಕ, ಅರೆಕಾಲಿಕ ನ್ಯಾಯಿಕ ಸ್ವಯಂಸೇವಕರಾದ ಸಂಜೀವಕುಮಾರ ಹೊಸ್ಕೇರಿ, ಸುಧಾಕರ ನಾಯಕ, ಲಕ್ಷ್ಮೀ ಸಿದ್ದಿ, ಗೌರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net