ಲೈಬ್ರರಿಗಳ ಕ್ರಿಯಾತ್ಮಕ ಕೆಲಸಕ್ಕೆ ಶ್ರಮಿಸಲಿ

SVR LIBRARY
Published on

ಸವಣೂರ: ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳ ಕ್ರಿಯಾತ್ಮಕ ಕೆಲಸಕ್ಕೆ ಗ್ರಂಥಾಲಯ ಸಲಹಾ ಸಮಿತಿಯ ಪದಾಧಿಕಾರಿಗಳು ಶ್ರಮವಹಿಸಲು ಮುಂದಾಗಬೇಕು ಎಂದು ತಾಪಂ ಇಒ ಬಸವರಾಜ ಶಿಡೇನೂರ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಹಿರೇಮುಗದೂರ, ಹತ್ತಿಮತ್ತೂರ, ಹೂವಿನಶಿಗ್ಲಿ ಹಾಗೂ ಚಿಲ್ಲೂರ ಬಡ್ನಿ ಗ್ರಾಮಗಳ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಂಥಾಲಯ ಸದುಪಯೋಗ ಪಡಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. ಉತ್ತಮ ಗ್ರಂಥಾಲಯ ವ್ಯವಸ್ಥೆಗೆ ಸದಸ್ಯರ ಜವಾಬ್ದಾರಿ ಬಹುಮುಖ್ಯವಾಗಿದೆ. ಗ್ರಂಥಾಲಯದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಗ್ರಾಪಂ ಸಹಕಾರ ನೀಡಬೇಕು. ತಾಪಂ ವತಿಯಿಂದ ಗ್ರಂಥಾಲಯ ನಿರ್ವಹಣೆ ಮಾಡಲು ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದರು.

ಹಿರೇಮುಗದೂರ ಗ್ರಾಪಂ ಅಧ್ಯಕ್ಷೆ ಈರವ್ವ ಮಾಳಪ್ಪನವರ, ಗ್ರಾಪಂ ಸದಸ್ಯರಾದ ಮಂಜನಗೌಡ ಕಲ್ಲನಗೌಡ್ರ, ನಿಂಗಪ್ಪ ಆರೇರ, ವೀರೇಶ ಹಿತ್ತಲಮನಿ, ತಾಪಂ ಸಿಬ್ಬಂದಿ ಶಿವನಗೌಡ ತಿರಕನಗೌಡ್ರ, ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ ಹಿರೇಮಠ, ಅನ್ನಪೂರ್ಣ ಬಿಜಾಪುರ, ಗ್ರಂಥಪಾಲಕರಾದ ಕವಿತಾ ಸೋಮಸಾಗರ, ನೀಲಮ್ಮ ಮಲ್ಲೂರ, ಹೊನ್ನಪ್ಪ ಕನಕಮ್ಮನವರ, ಮಾರುತಿ ವಡ್ಡರ ವಿವಿಧ ಗ್ರಂಥಾಲಯ ಸಲಹಾ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net