ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾದಿಯಲ್ಲಿ ಸಾಗೋಣ

2KND-01- Mahatma ghandi
Published on

ಕುಂದಗೋಳ: ಸತ್ಯ, ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನಡೆದ ಹಾದಿಯಲ್ಲಿ ನಾವೆಲ್ಲ ಸಾಗೋಣ ಎಂದು ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಪಟ್ಟಣದ ಗಾಳಿ ಮರೆಮ್ಮ ದೇವಸ್ಥಾನದಿಂದ ಮೂರು ಅಂಗಡಿ ಕೂಟ ಬಳಿ ಇರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿವರೆಗೆ ಕೆಪಿಸಿಸಿ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ, ಹಾಗೂ ಕುಂದಗೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲೀಂ ಕ್ಯಾಲಕೊಂಡ ಅವರ ಅಧ್ಯಕ್ಷತೆಯಲ್ಲಿ ನಡೆದ ಗಾಂಧಿ ನಡಿಗೆ ಪಾದಯಾತ್ರೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ವಸಾಹತು ಶಾಹಿ ಆಡಳಿತ ಮುಷ್ಠಿಯಲ್ಲಿದ್ದ ನಮ್ಮ ದೇಶವನ್ನು ಅವರ ಕೈಯಿಂದ ಬಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದರು.
ಕೆಪಿಸಿಸಿ ಸದಸ್ಯ ಹಾಗೂ ಸಂಯೋಜಕ ಚಂದ್ರ ಶೇಖರ ಜುಟ್ಟಲ್, ಮುಖಂಡರಾದ ಸಕ್ರು ಲಮಾಣಿ ಹಾಗೂ ದಯಾನಂದ ಕುಂದೂರ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶ್ವೇತ ವಸ್ತ್ರ, ಹಾಗೂ ಗಾಂಧಿ ಟೋಪಿ ಧರಿಸಿ ಭಾಗವಹಿಸಿದ್ದರು.
ಕಾಂಗ್ರೆಸ್ ಪಕ್ಷದ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ, ಮುಖಂಡರಾದ ಗೌಡಪ್ಪಗೌಡ ಪಾಟೀಲ, ಸ್ವಾತಿ ಮಾಳಗಿ, ಜಗದೀಶ ಉಪ್ಪಿನ, ದೃತಿ ಸಾಲ್ಮನಿ, ವೆಂಕನಗೌಡ್ರ ಹಿರೇಗೌಡ್ರ, ಬಸವರಾಜ ನಾಯ್ಕರ, ಗಂಗಾಧರ ಪಾಣಿಗಟ್ಟಿ, ಮಲ್ಲಿಕಾರ್ಜುನ ಕಿರೇಸೂರ, ಪ್ರಭುಗೌಡ ಸಕ್ಯಾಗೌಡಶ್ಯಾನಿ, ಅಪ್ಪಣ್ಣ ಹಿರೇಗೌಡ್ರ, ರುದ್ರಪ್ಪ ಮೂಲಿಮನಿ, ಅಪ್ಪಣ್ಣ ಹಿರೇಗೌಡ್ರ, ಸಲೀಂ ಕಡ್ಲಿ, ವೈ.ಜಿ. ಪಾಟೀಲ, ಹರೀಶ ಲಕ್ಷ್ಮೇಶ್ವರ, ರಾಘವೇಂದ್ರ ನೇರ್ತಿ, ಈರಪ್ಪ ನಾಗಣ್ಣವರ, ಚಂದ್ರಶೇಖರ ಕಾಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net